ಹರನಹಳ್ಳಿ – ಕೆಂಗಾಪುರ ಮಠದಲ್ಲಿ ದೀಪೋತ್ಸವ

ಚನ್ನಗಿರಿ.ಡಿ.೩೧; ತಾಲ್ಲೂಕಿನ ಹರನಹಳ್ಳಿ – ಕೆಂಗಾಪುರ ಶ್ರೀ ರಾಮಲಿಂಗೇಶ್ವರ ಮಠದಲ್ಲಿ  ಕಾರ್ತೀಕ ಮಾಸದ ದೀಪೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀ ರಾಮಲಿಂಗೇಶ್ವರ ಸ್ವಾಮೀಜಿಯವರು ದೀಪ ಬೆಳಗಿ ಶುಭ ನುಡಿ ಸಮರ್ಪಿಸಿದ ಬಳಿಕ ನೆರೆದ ಭಕ್ತಸಮೂಹ ದೀಪ ಹಚ್ಚಿ ಸಂಭ್ರಮಿಸಿ ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು.