ಹರಗಿನದೋಣಿ ಗ್ರಾಮದಲ್ಲಿ ,
 ವಾಟರ್ ಟ್ಯಾಂಕ್ ಫಾರ್ ಡ್ರಿಂಕಿಂಗ್‍ವಾಟರ್” “ಲೋಕಾರ್ಪಣೆ”


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.14: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು ಬಳ್ಳಾರಿಯ ಹರಗಿನದೋಣಿ ಗ್ರಾಮದಲ್ಲಿ , ಭಾರತ ಸರಕಾರದ “ಉನ್ನತ ಭಾರತ್ ಅಭಿಯಾನ” ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ನೆರವಿನೊಂದಿಗೆ ಮಾಡಲಾಗಿದ್ದ ಪ್ರಾಜೆಕ್ಟ್ “ಐ.ಓ.ಟಿ. ಬೇಸ್ಡ್ ಆಟೋಮ್ಯಾಟಿಕ್ ವಾಟರ್ ಟ್ಯಾಂಕ್ ಫಾರ್ ಡ್ರಿಂಕಿಂಗ್‍ವಾಟರ್” ಯನ್ನು ಮಾ.12ರಂದು ಲೋಕಾರ್ಪಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಶ್ರೀಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸಾನಿಧ್ಯದಲ್ಲಿ, ಹಾಗೂ ವೀ.ವಿ.ಸಂಘದ ಪದಾದಿಕಾರಿಗಳಾದ  ಅಧ್ಯಕ್ಷರಾದ  ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ  ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಶ್ರೀ ಗೋನಾಳ್ ರಾಜಶೇಖರ್ ಗೌಡರು, ಉನ್ನತ ಭಾರತ್ ಅಭಿಯಾನ(ಯು.ಬಿ.ಏ) ರೀಜನಲ್ ಕೋ-ಆರ್ಡಿನೇಟರ್ ಶ್ರೀಎನ್.ರಾಮಾಂಜಿನೇಯುಲು, ಇವರುಗಳು,  ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ವಿದ್ಯುತ್ ಇಂಜನೀರಿಂಗೆ ವಿಭಾಗ ವತಿಯಿಂದ ಡಾ||ಕೊಟ್ರೇಶ, ಭಾಗವಹಿದ್ದರು.
 ಆರ್.ವೈ.ಎಂ.ಈ.ಸಿ.ಯ ಯು.ಬಿ.ಏ.ಕೋ-ಆರ್ಡಿನೇಟರ್ ಡಾ||ಯು.ಎಂ.ನೇತ್ರಾವತಿ, ಅವರ ನೇತೃತ್ವದ ತಂಡದಲ್ಲಿ – ಎಲಿಯ ಸುಂದರಂ, ಶರಣಬಸಪ್ಪ, ಶ್ರೀದಿವಾಕರ್, ಯು.ಶಾಂತಕುಮಾರ್, ವಿದ್ಯಾರ್ಥಿಗಳು ಪ್ರಾಜೆಕ್ಟ್‍ನ ರುವಾರಿಗಳಾಗಿರುತ್ತಾರೆ. ಇದು ವಿದ್ಯುತ್ ವಿಭಾಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.  
ಹರಗಿನದೋಣಿ ಗ್ರಾಮದ ಅಧ್ಯಕ್ಷರಾದ ಶ್ರೀಪಾಲಾಕ್ಷಿಗೌಡರು,  ಉಪಾಧ್ಯಕ್ಷರಾದ ಶ್ರೀತಿಪ್ಪಮ್ಮ ವೀರೇಶ್, ಶ್ರೀಜಿ.ತಿಮ್ಮನ ಗೌಡರು, ಶ್ರೀಶಿವರಾಮಿರೆಡ್ಡಿ, ಶ್ರೀ ಆಲದಲ್ಲಿ ಗುರುದೇವನಗೌಡರು, ಶ್ರೀಮತಿ ಶೋಭಾ ಇನ್ನಿತರರು ಭಾಗವಹಿಸಿದ್ದರು.
ಶ್ರೀಶ್ರೀಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ ತಮ್ಮ ಆಶಿರ್ವಚನಗಳಲ್ಲಿ “ನಾವೆಲ್ಲ ಧರ್ಮದ ಜೊತೆಗೆ, ಧರ್ಮ, ಸಮಾಜ ಹಿತಕಾರ್ಯಗಳಲ್ಲಿ, ಅದರಲ್ಲಿ ಗ್ರಾಮಗಳ ಅಭಿವೃದ್ದಿಯಲ್ಲಿ ಇರಬೇಕು, ಇದರಿಂದ ಪ್ರಜಾಕ್ಷೇಮ ಹಾಗು ವ್ಯಕಿತ್ವ ವಿಕಸನಾ ಯಾಗುತ್ತದೆ. ಶಿಕ್ಷಣವಾಗಿರಲಿ, ಮೂಲಸೌಲಭ್ಯ ಒದಗಿಸುವುದು ಆಗಿರಲಿ, ಇನ್ನಿತರೇ ಕಾರ್ಯಗಳು ಸಮಾಜಕ್ಕೆ , ಜನರಿಗೆ, ಪ್ರಾಣಿಗಳಿಗೆ ಹಿತಕಾರಿ ಯಾಗಿರಬೇಕು, ಯುವಕರು ತಾಮು ಎಷ್ಟೇ ಉನ್ನತ ವಿದ್ಯಾವಂತರಾದರು ತಮ್ಮ ಉರಿನ, ದೇಶದ ಬಗ್ಗೆ ಕಾಳಜಿ ವಹಿಸಿ ಅಭಿವೃದ್ದಿಯಲ್ಲಿ ತೊಡಗಿಸಬೇಕೆಂದು, ತಮ್ಮ ಮೂಲಗಳನ್ನು ಎಂದಿಗು ಮರೆಯಬಾರದು ” ನುಡಿದರು.
ಇದೇ ಸಂಧರ್ಭದಲ್ಲಿ ವೀ.ವಿ.ಸಂಘದ ಪದಾದಿಕಾರಿಗಳು ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಯು.ಬಿ.ಏ,ರೀಜನಲ್ ಕೋ-ಆರ್ಡಿನೇಟರ್ ಎನ್.ರಾಮಾಂಜಿನೇಯುಲು, ಮಾತನಾಡಿದರು “ ಇಂದಿನ ಭಾರತ ದೇಶದಲ್ಲಿನ ಹಲವಾರು ಗ್ರಾಮಗಳಲ್ಲಿ ಮೂಲಸೌಲಭ್ಯಗಳಲ್ಲಿ ಕುಡಿಯುವ ನೀರು ಒದಗಿಸುವುದು ಮುಖ್ಯವಾದ ಕಾರ್ಯ, ಇಲ್ಲ ವಾದರೆ ಜನರು ಹಲವಾರು ರೋಗಗಳಿಗೆ ಒಳಗಾಗುತ್ತಾರೆ, ಅನೇಗ ಬಾರಿ ಅವರು ಸಕಾಲಿಕ ವೈದ್ಯಕೀಯ ಚಿಕಿತ್ಸೆ ಸಿಗುವುದಿಲ್ಲ, ಆದಕಾರಣ ಇಂತಹ ನೂತನ ತಂತ್ರಜ್ಞಾನ – ಐ.ಓ.ಟಿ (ಇಂಟರ್‍ನೆಟ್ ಆಫ್ ಥಿಂಗ್ಸ್) ಬೇಸ್ಡ್ ಆಟೋಮ್ಯಾಟಿಕ್ ವಾಟರ್ ಟ್ಯಾಂಕ್ ಫಾರ್ ಡ್ರಿಂಕಿಂಗ್‍ವಾಟರ್” ಎಂಬುವ ಪ್ರಾಜೆಕ್ಟವನ್ನು ನಮ್ಮ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಇಂಜನೀರಿಂಗೆ ವಿಭಾಗ ವಿದ್ಯಾರ್ಥಿವೃಂದದ ಜೊತೆಯಲ್ಲಿ ಶಿಕ್ಷಕರು ತೋಡಗಿಸಿಕೋಂಡು ಕಾರ್ಯರೂಪಕ್ಕೆ ತಂದಿರುವುದು ತುಂಬಾ ಶ್ಲಾಘನೀಯವಾದ ವಿಷಯ, ಇನ್ನು ಹಲವಾರು ಗ್ರಾಮ ಸಮಸ್ಯೆಗಳನ್ನು ನಿವಾರಿಸುವುದರಲ್ಲಿ ಭಾಗವಹಿಸಲು” ಕರೆನೀಡಿದರು. ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ  ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ , ಇವರುಗಳು .ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಉಪಸ್ಥಿತರಿದ್ದರು.