
ದಾವಣಗೆರೆ.ಮೇ.೧೬; ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಉತ್ತರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಲಾಸ್ಯ ಫೌಂಡೇಷನ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅಭಿಮಾನಿಗಳು, ದಾವಣಗೆರೆ ನಗರದ ರಾಂ ಅಂಡ್ ಕೋ ವೃತ್ತದಲ್ಲಿರುವ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಿದರು.ಲಾಸ್ಯ ಫೌಂಡೇಷನ್ ಸಂಸ್ಥಾಪಕರಾದ ಸೂರ್ಯಪ್ರಕಾಶ್ , ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಗೆಲುವು ಸಾಧಿಸಿದರೆ ವಿನಾಯಕ ದೇವಸ್ಥಾನದಲ್ಲಿ 501 ಭಕ್ತಾಧಿಕಾರಿಗಳಿಗೆ ಹಣ್ಣು-ಕಾಯಿ ಪ್ರಸಾದ ನೀಡುವ ಹರಕೆಯನ್ನು ಹೊತ್ತಿದ್ದರು. ಅದರಂತೆ ಇಂದು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾಧಿಕಾರಿಗಳಿಗೆ ಹಣ್ಣು ಕಾಯಿ ಪ್ರಸಾದ ನೀಡಿ ತಮ್ಮ ಹರಕೆ ಪೂರೈಸಿದರು.ಈ ವೇಳೆ ಮಾತನಾಡಿದ ಅವರು ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಗೆಲುವು ಸಾಧಿಸಿದ್ದು ತಂಸದ ತಂದಿದೆ. ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಆಯುರಾರೋಗ್ಯ ಲಭಿಸಿ ಮುಂದಿನ ರಾಜಕೀಯ ಭವಿಷ್ಯ ಉತ್ತಮವಾಗಲಿ ಎಂದು ಶುಭಕೋರಿದರು.ಈ ವೇಳೆ ಎಸ್ ಎಸ್ ಮಲ್ಲಣ್ಣನವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.