ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 3 :- ಅನೇಕರ ಅಂದರ ಪಾಲಿಗೆ ಬೆಳಕಾಗಿ ಕಣ್ಣಪ್ಪನಾದ ನೇತ್ರಾ ತಜ್ಞ, ಚುನಾವಣಾ ಸಂದರ್ಭದಲ್ಲಿ ಸಹ ಬೇರೆ ಪಕ್ಷದವರನ್ನು ನಿಂದಿಸದೆ ಸಾಮಾಜಿಕ ಕಳಕಳಿಯಲ್ಲಿ ಮತಯಾಚನೆ ಮಾಡಿದ ಅಜಾತಶತ್ರುವಿನಂತಹ ಗುಣವಿರುವ ಡಾ ಶ್ರೀನಿವಾಸ ಕೂಡ್ಲಿಗಿ ಕ್ಷೇತ್ರದಲ್ಲಿ ಬಹುಮತದ ಗೆಲುವು ಪಡೆಯಬೇಕೆಂದು ಶ್ರೀ ವಜ್ರಮುಷ್ಠಿ ಆಂಜೆನೇಯ ಸ್ವಾಮಿಗೆ ಹರಕೆ ಹೊತ್ತ ಡಾ ಶ್ರೀನಿವಾಸ ಅವರ ಅಪ್ಪಟ ಅಭಿಮಾನಿ ಪಟ್ಟಣದ ಕಾಟೇರ ಲಂಕೇಶ ತನ್ನ ಕುಟುಂಬದ ಜೊತೆ ಸೇರಿ ಇಂದು ಬೆಳಿಗ್ಗೆ ಡಾ ಶ್ರೀನಿವಾಸ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿ 101ತೆಂಗಿನಕಾಯಿ ಹೊಡೆದು ಹರಕೆ ತೀರಿಸಿದರು.
ನಿವೃತ್ತ ಯೋಧ ಕಾಟೇರ ರಮೇಶ ಅವರ ಸಹೋದರ ಬ್ಯುಸಿನೆಸ್ ಮ್ಯಾನ್ ಕಾಟೇರ ಲಂಕೇಶ ಕೂಡ್ಲಿಗಿ ಪಟ್ಟಣದ ಆಜಾದ್ ನಗರದಲ್ಲಿ ವಾಸವಾಗಿದ್ದು ಚುನಾವಣೆಗೂ ಮುಂಚೆ ಕ್ಷೇತ್ರದಲ್ಲಿ ಡಾ ಶ್ರೀನಿವಾಸ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಆರೋಗ್ಯ ಶಿಬಿರ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ನಡೆಸಿ ಆರೋಗ್ಯಕರ ಸಮಾಜನಿರ್ಮಾಣದ ಕನಸುಕಂಡು ಚುನಾವಣಾ ಸಂದರ್ಭದಲ್ಲಿ ಸಹ ಯಾವುದೇ ಪಕ್ಷದವರನ್ನು ನಿಂದಿಸದೆ ಅಭಿವೃದ್ಧಿ ಚಿಂತನೆ ಆರೋಗ್ಯದ ಕಾಳಜಿ ಕ್ಷೇತ್ರದ ನಿರುದ್ಯೋಗ ಸಮಸ್ಯೆ ಕುರಿತಂತೆ ಜನರಬಳಿ ಚರ್ಚೆನಡೆಸುತ್ತಿದ್ದ ಡಾ ಶ್ರೀನಿವಾಸ ಅವರ ನೇರನುಡಿಯ ಗುಣಕ್ಕೆ ಮನಸೋತ ಅಭಿಮಾನಿ ಕಾಟೇರ ಲಂಕೇಶ ಇಂತಹ ವ್ಯಕ್ತಿಗಳು ನಮ್ಮ ಕ್ಷೇತ್ರಕ್ಕೆ ಬೇಕು ಇವರು ಬಹುಮತದಿಂದ ಗೆಲ್ಲಬೇಕೆಂದು ಆರಾಧ್ಯ ದೈವ ಶ್ರೀ ವಜ್ರಮುಷ್ಠಿ ಆಂಜನೇಯ ಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದರು ಅದರಂತೆ ದೇವರ ಕೃಪೆಯಲ್ಲಿ ಬಹುಮತ 54ಸಾವಿರಮತಗಳ ಅಂತರದ ಗೆಲುವು ಸಾಧಿಸಿ ಕ್ಷೇತ್ರದಲ್ಲಿಯೇ ಐತಿಹಾಸಿಕ ಸಾಧನೆ ಮಾಡಿದ್ದು ಖುಷಿ ತಂದಿದ್ದು ಇಂದು ಶನಿವಾರವಾಗಿದ್ದರಿಂದ ಶ್ರೀ ವಜ್ರಮುಷ್ಠಿ ಆಂಜನೇಯ ದೇಗುಲಕ್ಕೆ ತನ್ನ ಪತ್ನಿ ಗೌರಿ ಹಾಗೂ ಮಗ ದಿಗಂತ್ ಜೊತೆ ತೆರಳಿ ವಿದ್ಯಾವಂತ, ಕ್ಷೇತ್ರದ ಜನಪರ ಸಾಮಾಜಿಕ ಕಳಕಳಿಯ ಶಾಸಕ ಡಾ ಶ್ರೀನಿವಾಸ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ 101ತೆಂಗಿನಕಾಯಿ ಹೊಡೆದು ಇಂದು ಹರಕೆ ತೀರಿಸಿದ್ದಾರೆ.