ಹಮ್ ಫೌಂಡೇಷನ್‌ನಿಂದ ಪರಿಚಯ ಕಾರ್ಯಕ್ರಮ

ದಾವಣಗೆರೆ.ಏ.೧೭: ಹಮ್ ಫೌಂಡೇಷನ್ ಭಾರತ್ ದೇವನಗರಿ ಶಾಖೆಯಿಂದ ನಗರದ ರೋಟರಿ ಬಾಲಭವನದಲ್ಲಿ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಭಾರತ ಮಾತೆ ಹಾಗೂ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಫೌಂಡೇಷನ್‌ನ ಸಂಚಾಲಕಿ ಡಾ. ಆರತಿ ಸುಂದರೇಶ್, ಫೌಂಡೇಷನ್‌ನ ಹುಟ್ಟು, ಧ್ಯೇಯೋದ್ದೇಶಗಳನ್ನು ಸದಸ್ಯರಿಗೆ ತಿಳಿಸಿಕೊಟ್ಟರು. ನಂತರ ಎಲ್ಲ ಸದಸ್ಯರು ತಮ್ಮ ತಮ್ಮ ಪರಿಚಯವನ್ನು ಮಾಡಿಕೊಟ್ಟರು. ಸದಸ್ಯರಿಗಾಗಿ ಮೆಮೋರಿ ಪವರ್ ಸ್ಪರ್ಧೆ ನಡೆಸಲಾಗಿ ಸೌಮ್ಯ ಪ್ರಥಮ ಸ್ಥಾನ, ದೇವಿಕ ಸುನೀಲ್ ದ್ವಿತೀಯ ಹಾಗೂ ಮಂಗಳ ಅವರು ತೃತೀಯ ಸ್ಥಾನ ಪಡೆದರು.ಕಾರ್ಯಕ್ರಮದಲ್ಲಿ ಹಮ್ ಫೌಂಡೇಷನ್‌ನ ಅಧ್ಯಕ್ಷೆ ಸುಮಾ ಸದಾನಂದ್, ಕಾರ್ಯದರ್ಶಿ ಚಂದನ, ಖಜಾಂಚಿ ಚೇತನ ಚಿದಂಬರ್, ಉಪಾಧ್ಯಕ್ಷೆ ಹೇಮಲತಾ, ಜಂಟಿ ಕಾರ್ಯದರ್ಶಿ ನಾಗರತ್ನಮ್ಮ, ಇನ್ನಿತರರು ಉಪಸ್ಥಿತರಿದ್ದರು. ಸಂಸ್ಕಾರ ಪ್ರಮುಖ್ ಸುಕನ್ಯ ಬೆಳ್ಳೂಡಿ ಸ್ವಾಗತಿಸಿದರು. ಚಂದನ ನಿರೂಪಿಸಿದರು. ಸರಳ ಶಾಂತಿನಾಥ್ ವಂದಿಸಿದರು.