ಹಮಾಲಿ ಕೆಲಸಗಾರರ ಕುಟುಂಬಗಳಿಗೆ ನೆರವು

ಜಗಳೂರು.ಜೂ.೫; ಇಂಡಿಯನ್ ಡೆವಲಪ್ಮೆಂಟ್ ಆರ್ಗನೈಜೇಷನ್ಸಂಸ್ಥೆ ವತಿಯಿಂದ 30 ಹಮಾಲಿ ಕೆಲಸಗಾರರ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು.ಕೊರೋನ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆಯಾಗಿ ಕೆಲವು ದಿನಗಳು ಕಳೆಯುತ್ತಿದೆ ಜಗಳೂರು ತಾಲೂಕು ಅತ್ಯಂತ ಬಡ ತಾಲೂಕು ಜಗಳೂರಿ
ನಲ್ಲಿ ಕೂಲಿ ಕಾರ್ಮಿಕರು ರೈತ ವರ್ಗದ ಜನರೇ ಹೆಚ್ಚು ವಾಸಿಸುತ್ತಿದ್ದು ಅಂದು ದುಡಿದ ದುಡಿಮೆಯೇ ಅಂದಿನ ಗಂಜಿಗೆ ಸಾಲದೆಂಬಂತೆ ವಾಸ ಮಾಡುತ್ತಿದ್ದಾರೆ.ಜಗಳೂರು ಪಟ್ಟಣ ವಿದ್ಯಾನಗರದ ಪಾರ್ಕ್ ನಲ್ಲಿ  ಹಮಾಲಿ ಕೆಲಸ ಮಾಡುವ 30 ಕುಟುಂಬಗಳಿಗೆಇಂಡಿಯನ್ ಡೆವಲಪ್ಮೆಂಟ್ ಆರ್ಗನೈಜೇಷನ್ (ಎನ್.ಜಿ.ಓ) ಸಂಸ್ಥೆ ವತಿಯಿಂದ ಮಾಸ್ಕ್ ಮತ್ತು ಫುಡ್ ಕಿಟ್ ಗಳನ್ನು ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ  ಸಂತೋಷ್ ಬಾಗೋಜಿ  ನೇತೃತ್ವದಲ್ಲಿ ವಿತರಿಸಿದರು. ಸಂಸ್ಥೆಯ ಗೌರವ ಅಧ್ಯಕ್ಷ  ಪ್ರಹ್ಲಾದ್ ಮಾತನಾಡಿ ಜಗಳೂರು ಟೌನ್ ನಲ್ಲಿ ಹಮಾಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಮಾಸ್ಕ್ ಮಾಡಿದ್ದೇವೆ ಕಳೆ ದಿನಗಳಿಗೆ ಪಟ್ಟಣದ ಹೊರವಲಯದಲ್ಲಿರುವ ಅಲೆಮಾರಿ ಕುಟುಂಬದ ಜನಾಂಗದವರಿಗೆ  ನಮ್ಮ ಇಂಡಿಯನ್ ಡೆವಲಪ್ಮೆಂಟ್ ಆರ್ಗನೈಜೇಷನ್ (ಎನ್.ಜಿ.ಓ) ಸಂಸ್ಥೆ ವತಿಯಿಂದ ಆಹಾರದ ಕಿಟ್ ಮತ್ತು ಮಾಸ್ಕ್  ವಿತರಣೆ ಮಾಡಿದ್ದೇವೆ ಇನ್ನು ಮುಂದೆ ನಮ್ಮ  ಸಂಸ್ಥೆ ವತಿಯಿಂದ ಕೈಲಾದಷ್ಟು  ಸಹಾಯ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಇಂಡಿಯನ್ ಡೆವಲಪ್ಮೆಂಟ್ ಆರ್ಗನೈಜೇಷನ್ ಸಂಸ್ಥೆ ಗೌರವ ಅಧ್ಯಕ್ಷ  ಪ್ರಹ್ಲಾದ್.ಪ್ರಧಾನ ಕಾರ್ಯದರ್ಶಿ ಮಂಜುನಾಥ್. ಖಜಾಂಚಿ ಸಂತೋಷ್ ನಿರ್ದೇಶಕರಾದ ಮೋಹನ್ ಕುಮಾರ್.ಜಿ.ಎಸ್ ಸದಸ್ಯರಾದ  ಪ್ರಶಾಂತ್. ನಾಗಭೂಷಣ್  ರಫೀಕ್. ಸೇರಿದಂತೆ ಇದ್ದರು.