ಹಬ್ಬ, ಜಾತ್ರೆ, ಸಭೆಗಳಲ್ಲಿ ಗುಂಪುಗಾರಿಕೆ ನಿಷೇಧಕ್ಕೆ ಸ್ವಾಗತ ಆದರೆ ಕೈಗಾರಿಕೆಗಳಲ್ಲಿ ಈ ನಿಯಮ ಇಲ್ಲ ಯಾಕೆ?- ರಾಜಶೇಖರ

ಕುರುಗೋಡು.ಮಾ.27 ಕೊರೋನಾ ಸೋಂಕು ಹೆಚ್ಚಳದ ಆತಂಕದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಹಬ್ಬ, ಜಾತ್ರೆ, ಜಯಂತಿ, ಮತ್ತು ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಗುಂಪುಗೂಡುವುದನ್ನು ಜಿಲ್ಲಾಧಿಕಾರಿಗಳು ನಿಷೇಧಮಾಡಿರುವುದು ಸ್ವಾಗತಾರ್ಹ. ಆದರೆ ಈ ನಿಯಮವನ್ನು ಕೈಗಾರಿಕಾ ಪ್ರದೇಶಗಳಲ್ಲಿ ಈ ನಿಮಯವನ್ನು ಜಾರಿಮಾಡಬೇಕೆಂದು ಕುಡುತಿನಿ ಪಟ್ಟಣ ಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ ರವರು ಒತ್ತಾಯಿಸಿದ್ದಾರೆ.
ಈ ಕುರಿತು ಶುಕ್ರವಾರ ಸಮೀಪದ ಕುಡುತಿನಿ ಪಟ್ಟಣಪಂಚಾಯಿತಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್‍ಸೋಂಕು ಹೆಚ್ಚಳದ ಆತಂಕದ ಹಿನ್ನಲೆಯಲ್ಲಿ ವಿಪತ್ತು ನಿರ್ವಾಹಣಾ ಕಾಯ್ದೆ 2005ರ ಕಲಂ34ರಲ್ಲಿನ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಸಾರ್ವಜನಿಕರ ಸ್ಥಳಗಳಲ್ಲಿ ಗುಂಪುಗೂಡುವಿಕೆ,ಸಭೆ,ಸಮಾರಂಭಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಇದು ಉತ್ತಮಬೆಳೆವಣಿಗೆಯಾಗಿದೆ. ಆದರೆ ಬಳ್ಳಾರಿಜಿಲ್ಲೆಯ ಬ್ರಹತ್ ಕೈಗಾರಿಕೆ ಜಿಂದಾಲ್ ಸೇರಿದಂತೆ ಇತರೆ ಕೈಗಾರಿಗಳಲ್ಲಿ ಸಾವಿರಾರುಮಂದಿ ಕಾರ್ಮಿಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಾರಂಭದಲ್ಲಿ ಜಿಂದಾಲ್ ಸೇರಿದಂತೆ ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಕೋರೋನಾ ಸೋಂಕು ಹೆಚ್ಚಳವಾಗಿತ್ತು. ಆದರೆ ಅಂಥಹ ಕೈಗಾರಿಕಾ ಪ್ರದೇಶಗಳಲ್ಲಿ ನಿಷೇಶ ಹೇರುವ ಬದಲಾಗಿ ಬೇರೆಡೆ ನಿಷೇಧ ಹೇರುವುದು ಅಷ್ಟೊಂದು ಸಮಂಜಸ ಅಲ್ಲ ಎಂದು ನುಡಿದರು.
ಅದಲ್ಲೂರಲ್ಲೂ ಜಿಲ್ಲೆಯ ಎಲ್ಲಾ ಶಾಸಕರು, ಮತ್ತು ಮಂತ್ರಿಮಹೋಧಯರು ಜಿಂದಾಲ್ ಸೇರಿದಂತೆ ಇತರೆ ಕೈಗಾರಿಕಾ ಪ್ರದೇಶಗಳ ಮೇಲೆ ಏಕೆ ಅನುಕಂಪ ಎಂದು ತೀಷ್ಣವಾಗಿ ನುಡಿದರು. ಕೈಗಾರಿಕೆಗಳಲ್ಲಿ ಕೆಲಸಮಾಡುವ ಕಾರ್ಮಿಕರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು?
ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಕೋರೋನಾ ಹೆಚ್ಚಳದ ಹಿನ್ನೆಲೆಯಲ್ಲಿ ನಿಷೇಧ ಎಷ್ಟು ಮುಖ್ಯವೋ ಅಷ್ಟೇ ಸರಿಸಮಾನವಾಗಿ ಜಿಂದಾಲ್ ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಕಡ್ಡಾಯವಗಿ ಕೊರೋನಾ ಹರಡುವಿಕೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.
ಪತ್ರಿಗಾಷ್ಟಿಯಲ್ಲಿ ಪಟ್ಟಣಪಂಚಾಯಿತಿ ಸದಸ್ಯ ವೆಂಕಟರಮಣಬಾಬು, ಬಿಕೆ.ಲೆನಿನ್, ಕನ್ನಿಕೇರಿಪೊಂಪಾಪತಿ, ಮುಖಂಡ ಜಿ. ಪ್ರತಾಪ್, ವಿನೋದ್ ಸೇರಿದಂತೆ ಇತರರು ಇದ್ದರು.