ಹಬ್ಬ ಜಾತ್ರೆಗಳು ನಾಡಿನ ಸಾಂಸ್ಕøತಿಕ ಪರಂಪರೆ: ಅಭಿನವ ಶಿವಲಿಂಗ ಶ್ರೀಗಳು

ಮಾಧನಹಿಪ್ಪರಗಿ:ಮೇ.6: ನಮ್ಮ ನಾಡಿನ ಸಾಂಸ್ಕøತಿ ಪರಂಪರೆಗಳು ನಾವು ಆಚರಿಸುವ ಹಬ್ಬಗಳಲ್ಲಿ ಜಾತ್ರೆಗಳಲ್ಲಿ ಕಾಣುತ್ತೇವೆ. ಕಾರಣ ನಿಮಿತ್ಯ ಚದುರಿ ಹೋದವರಿಗೆ ಗ್ರಾಮ ದೇವತೆಗಳ ಜಾತ್ರೆಯಗಳು ಒಂದಾಗಿಸುತ್ತವೆ ಎಂದು ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಪಧಿಪತಿ ಅಭಿನವ ಶಿವಲಿಂಗ ಸ್ವಾಮಿಗಳು ಹೇಳಿದರು.
ನಿನ್ನೆ ನಡೆದ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ 2023 ಮಹಾರಥೋತ್ಸವದಂದು ಸಾವುರಾರು ಭಕ್ತಾಧಿಗಳಿಗೆ ನೀಡಿದ ಆಶೀರ್ವಚನದಲ್ಲಿ, ನಮ್ಮೂರ ಜಾತ್ರೆಗಳು ಜಾತಿ ಮತ ಪಂಥ ಮೀರಿದವುಗಳು. ವರ್ಷದಲ್ಲಿ ಒಂದು ದಿನ ಶಿವಲಿಂಗೇಶ್ವರರ ತೇರನ್ನು ನೀವೆಲ್ಲಾ ಎಳೆದರೆ, ಆ ದೇವರು ನಿಮ್ಮ ಬಾಳಿನ ರಥವನ್ನು ವರ್ಷಪೂರ್ತಿ ಎಳೆಯುತ್ತಿರುತ್ತಾನೆ. ಭಕ್ತಿಯ ಪ್ರಾರ್ಥನೆಯಿಂದ ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಸಾಕ್ಷಾತ್ ಪರಶಿವನನ್ನು ಕಾಣುವಿರಿ. ಬರುವ 10 ರಂದು ಪ್ರಜಾ ಫ್ರಭುತ್ವದ ಹಬ್ಬ ಇರುವುದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿರಿ. ಯಾವುದೆ ಆಮೀಷಕ್ಕೆ ಒಳಗಾಗದೆ, ತಾಲೂಕಿನ ಅಭಿವೃದ್ಧಿ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಿರಿ. ನಿಮ್ಮ ಒಂದು ಮತ ಬಹಳ ಅಮೂಲ್ಯವಾದುದು. ಯೋಚಿಸಿ ಮತದಾನ ಮಾಡಿರಿ ಎಂದು ಮತದಾನದ ಮಹತ್ವ ತಿಳಿಸಿದರು. ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮಿಗಳು ಮಾತನಾಡಿದರು. ಸಿದ್ದಲಿಂಗ ಸ್ವಾಮಿಗಳು ಯಡ್ರಾಮಿ, ಪ್ರಭುಶಾಂತ ಸ್ವಾಮಿಗಳು ಹತ್ತಿ ಕಣಮಸ, ಮಹಾಂತ ಸ್ವಾಮಿಗಳು ಇಬ್ರಾಹಿಮಪುರ, ಪ್ರಭು ನೀಲಕಂಠ ಸ್ವಾಮಿಗಳು ಬೈಲಹೊಂಗಲ, ಸಿದ್ದಬಸವ ಸ್ವಾಮಿಗಳು ಬಳಗಾನೂರ, ಸದಾಶಿವ ಸ್ವಾಮಿಗಳು ಚಿಕಲಪರ್ವಿ, ಶಾಂತವೀರ ಶಿವಾಚಾರ್ಯರು ಹಿರೇಮಠ, ನಿರಂಜನ ದೇವರು ಮೈಸೂರು, ಮತ್ತು ಸ್ಥಳೀಯ ಹಿರೇಮಠದ ಶಾಂತವೀರ ಶಿವಾಚಾರ್ಯರು, ಶಿವದೇವೀ ಮಾತಾಜಿ, ಹಾಗೂ ಆಳಂದ ತಾಲೂಕಾ ದಂಢಾಧಿಕಾರಿ ಪ್ರದೀಪ ಹಿರೇಮಠ ಉಪಸ್ಥಿತರಿದ್ದರು. ನಂತರ ವಿದ್ಯತ್ ದೀಪಗಳಿಂದ ಅಲಕೃಂತಗೊಡ ಮಹಾರಥೋತ್ಸವ ಜರುಗಿತು. ಕಲಬರಗಿ ಬಿಜಾಪುರ ಸೋಲಾಪುರ ಪುಣೆ, ಆಂದ್ರದ ಅನೇಕ ನಗರಗಳಿಂದ ಸವಿರಾರು ಭಕ್ತರು ಸರ್ವ ಪೂಜ್ಯರ ಆಶೀರ್ವಾದ ಪಡೆದರು.