ಹಬ್ಬ- ಜಯಂತಿ ಆಚರಣೆ ಸರಳವಾಗಿ ನಡೆಯಲಿ

ಜಗಳೂರು.ಏ.೨; ಸರ್ಕಾರದ ಮಾರ್ಗ ಸೂಚಿಗಳ ಅನ್ವಯ ಏಪ್ರಿಲ್5 ರಂದು  ಮಾಜಿ ಪ್ರಧಾನಿ ಬಾಬು ಜಗಜೀವನರಾಮ್  ಹಾಗು  ಏಪ್ರಿಲ್ 14 ರಂದು ಡಾ.ಬಿ.ಆರ್ .ಅಂಬೇಡ್ಕರ್ ರವರ ಜಯಂತಿಯನ್ನ ಕೋವಿಡ್ ಎರಡನೇ ಅಲೆ  ಇರುವುದರಿಂದ ಜಿಲ್ಲಾಡಳಿತ ನಿರ್ದೇಶನ ಮೇರಿಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಸರಳವಾಗಿ ಆಚರಿಸಲು  ತೀರ್ಮಾನಿಸಿದ್ದು ಜನಪ್ರತಿನಿಧಿಗಳು ಹಾಗು ಸಂಘ ಸಂಸ್ಥೆಗಳ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನೆಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅದಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯ ಹಾಜರಾಗಿದ್ದು ಇಬ್ಬರು ಗಣ್ಯರ ಜಯಂತಿಯನ್ನ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು
 ಏಪ್ರಿಲ್ 5 ರಂದು ಬಾಬು ಜಗಜೀವರಾಮ್ ಅವರ ಜಯಂತಿ ಕಚೇರಿಗಳಲ್ಲಿ ಆಚರಿಸಿ ನಂತರ ಏಪ್ರಿಲ್ 14 ರಂದು ಬಾಬಾಸಾಹೇಬರ ಭಾವಚಿತ್ರ ಮೆರವಣಿಗೆ ವಿಚಾರವನ್ನ ಶಾಸಕರು ಹಾಗುಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು 
ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಸಮಿತಿ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ‌ ಮಾತನಾಡಿಪಟ್ಟಣದಲ್ಲಿ ಎರಡು ಕೋಟಿ ವೆಚ್ಚಮಾಡಿ ಡಾ.ಬಿ.ಆರ್ ಅಂಬೇಡ್ಕರ್ ಹಾಗು ಡಾ.ಬಾಬು ಜಗಜೀವನರಾಮ್ ಅವರ ಭವನ ನಿರ್ಮಾಣ ಮಾಡಿ 10  ವರ್ಷಗಳೇ ಕಳೆದರು ಉದ್ಘಾಟನೆ ಬಾಗ್ಯ ಕಂಡಿಲ್ಲ ಸುಸಜ್ಜಿತ ಭವನ ದುರಸ್ತಿಯಾಗಿ ನಿಂತಿದ್ದರು ಯಾವ ಜನಪ್ರತಿನಿಧಿಗಳು ಅದಿಕಾರಿಗಳು ನಿರ್ಲಕ್ಯವಹಿಸಿದ್ದಾರೆ ಎಂದು ಆರೋಪಿಸಿ ಶೀಘ್ರವೇ ಭವನ ಸರಿಪಡಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಬೇಕು ಎಂದು ಆಗ್ರಹಿಸಿದರು 
 ತಾ.ಪಂ  ಸದಸ್ಯ ಬಸವರಾಜ್ ಮಾತನಾಡಿ ಐದು  ವರ್ಷಗಳಿಂದಲೂ ಅಂಬೇಡ್ಕರ್ ಜಯಂತಿಗೆ ಹಲವು ವಿಜ್ಞಗಳು ಎದುರಾಗುತ್ತಿರುವುದು ಪಿತೂರಿಯೋ ದುರಂತವೋ ಗೊತ್ತಿಲ್ಲ ಆದರೆ ವಿಶ್ವ ಮಹನಾಯಕರ ಜಯಂತಿ ಸರಳವಾಗಿ ಆಚರಣೆ ಆಗುವುದು ಬೇಡ ಉಪ ಚುನಾವಣೆಗಳಲ್ಲಿ ಜನಜಾತ್ರೆ ಸೇರಲಿದೆ ಅಂತವುಗಳಿಗೆ ಕೊರೊನಾ ಅಡಿಹಾಗಲ್ವೇ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸರ್ಕಾರಿ ಬಾಲಕರ ಶಾಲಾ ಆವರಣದಲ್ಲಿಯೇ ಪ್ರತಿ ಜಯಂತಿಗಳನ್ನ ಆಚರಿಸಿದಂತೆ ಮಹಾತ್ಮರ ಜಯಂತಿಯನ್ನ ಬಹಿರಂಗ ವೇದಿಕೆಯಲ್ಲಿಯೇ ಆಚರಿಸಿ ಎಂದು ಒತ್ತಾಯಿಸಿದರು 
ತಾ.ಪಂ ಸದಸ್ಯರಾದ ತಿಮ್ಮಾಬೋವಿ   ಮಾತನಾಡಿ ವಿಶ್ವ ನಾಯಕರ ಜಯಂತಿಯನ್ನ ಅರ್ಥಪೂರ್ಣವಾಗಿ ಆಚರಿಸಬೇಕಾಗುತ್ತದೆ ನಿರ್ಲಕ್ಷೆ ವಹಿಸಿದಂತ ಅದಿಕಾರಿಗಳಿಗೆ ನೋಟೀಸ್ ಜಾರಿಮಾಡಿ ಸರ್ಕಾರದ ನಿಯಮಗಳಂತೆ ಆಚರಿಸಬೇಕು ಎಂದರು 

ಈ ಸಂದರ್ಭದಲ್ಲಿ  ತಾ.ಪಂ ಸದಸ್ಯರಾದ ಶಂಕ್ರನಾಯ್ಕ ಇ.ಒ.ಮಲ್ಲನಾಯ್ಕ ಸಮಾಜ ಕಲ್ಯಾಣ ಇಲಾಖೆ ಅದಿಕಾರಿ ಬಿ.ಮಹೇಶ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಜ್ಜಪ್ಪ ನಾಡಿಗರ್  ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ರಾಜು ಬಣಕಾರ್ ಡಿ.ಎಸ್.ಎಸ್.ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ಪವನ್ ಭರತ್ ಗ್ಯಾಸ್ ಮಾಲೀಕರಾದ ಓಬಣ್ಣ. ಪಲ್ಲಗಟ್ಟಿ ಶೇಖರಪ್ಪ ಪೂಜಾರಿ ಸಿದ್ದಪ್ಪ.ಕುಬೇಂದ್ರ ಪ್ಪ. ಸತ್ಯಮೂರ್ತಿ. ಸತೀಶ್. ಜಗಳೂರು ತಾಲ್ಲೂಕಿನ ಎಲ್ಲಾ ವಿವಿದ ಇಲಾಖೆ ಅದಿಕಾರಿಗಳು ಹಾಗು ದಲಿತ ಸಂಘಟನೆ ಮುಖಂಡರು ವಿವಿದ ಸಮಾಜದ ಮುಖಂಡರು ಪ್ರಗತಿಪರ ಹೋರಾಟಗಾರರು ಸಾರ್ವಜನಿಕರು ಇದ್ದರು