ಹಬ್ಬ ಆಚರಣೆಗೆ ಪೊಲೀಸರ ಅಡ್ಡಿ ಖಂಡಿಸಿ ವ್ಯಾಪಾರಸ್ಥರ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಇಂಡಿ :ನ.6:ಇಂಡಿ ಶಹರ ಪೆÇಲೀಸ್ ಠಾಣೆಯ ಸಿಪಿಐ ಭೀಮನಗೌಡ ಬಿರಾದಾರ ಅವರು ಹಿಂದೂಗಳ ಹಬ್ಬವಾzರಿಗೆ ಪಟಾಕಿ ಮಾರಾಟ ಮಾಡದಂತೆ ಕಿರುಕುಳ ನೀಡುತ್ತಿದ್ದಾರೆ.ಹಿಂದೂ ಹಬ್ಬ ಆಚರಿಸದಂತೆ ನೋಡಿಕೊಳ್ಳುತ್ತಿದ್ದು, ಪೆÇಲೀಸ್ ಅ„ಕಾರಿ ಹಿಂದೂ ಹಬ್ಬಗಳ ವಿರೋ„ಯಾಗಿದ್ದಾರೆ ಎಂದು ಆರೋಪಿಸಿ ಹಿಂದುಪರ ಸಂಘಟನೆ ಮುಖಂಡರು,ವ್ಯಾಪರಸ್ಥರು ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ದಿಡೀರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಿರತ ಸ್ಥಳಕ್ಕೆ ಇಂಡಿ ಶಹರ ಪೆÇಲೀಸ್ ಠಾಣೆಯ ಸಿಪಿಐ ಭೀಮನಗೌಡ ಬಿರಾದಾರ ಅವರು ಭೇಟಿ ನೀಡಿ,ಪ್ರತಿಭಟನಾಕಾರರ ಮನವೊಲಿಸಿದರು,ಪ್ರತಿಭಟನಾ ನಿರತರು ಪ್ರತಿಭಟನೆ ಹಿಂಪಡೆಯದೆ ಧರಣಿ ಮುಂದುವರೆಸಿದ್ದರು. ನಂತರ ಡಿವೈಎಸ್ಪಿ ಶ್ರೀಧರ ದೊಡ್ಡಿ ಅವರು ಪ್ರತಿಭಟನೆ ನಿರತ ಸ್ಥಳಕ್ಕೆ ಬಂದು ಪ್ರತಿಭನಾಕಾರರ ಸಮಸ್ಯೆ ಆಲಿಸಿ,ನಿಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ರಸ್ತೆ ತಡೆ ಧರಣಿ ಹಿಂದೆ ಪಡೆದರು.
ನಂತರ ಡಿವೈಎಸ್ಪಿ ಕಚೇರಿ ಮುಂದೆ ಮಾತನಾಡಿದ ಹಿಂದೂಪರ ಸಂಘಟನೆಯ ಮುಖಂಡರಾದ ಯಮುನಾಜಿ ಸಾಳುಂಕೆ,ಅವಿನಾಶ ಬಗಲಿ, ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿಯಂದು ಪಟಾಕಿ ಮಾರಾಟ ಮಾಡುವುದು ಸಂಪ್ರದಾಯ ಇದೆ.ಆದರೆ ಇಲ್ಲಿನ ಶಹರ ಪೆÇಲೀಸ್ ಅ„ಕಾರಿಗಳು ಪಟಾಕಿ ಮಾರಾಟ ಮಾಡದಂತೆ ನಿರ್ಬಂದ ಹೆರಿ ಹಿಂದೂಗಳ ಹಬ್ಬ ಆಚರಿಸದಂತೆ ತಡೆವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಂಪ್ರದಾಯಕವಾಗಿ ಹಬ್ಬ ಆಚರಿಸಲು ಪಟಾಕಿ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಘಟನೆ ವಿವರ : ಪಟ್ಟಣದಲ್ಲಿನ ಅಂಗಡಿಕಾರರು ಪಟಾಕಿ ಮಾರಾಟ ಮಾಡದಂತೆ ಇಂಡಿ ಶಹರ ಪೆÇಲೀಸ್ ಅ„ಕಾರಿಗಳು ನಿರ್ಬಧ ಹೆರಿದ್ದರು. ಆದರೂ ಅಂಗಡಿಕಾರರು ಕಳೆದ ಎರಡು ವರ್ಷದಿಂದ ಕೊರೊನಾದಿಂದ ವ್ಯಾಪಾರ ವಹಿವಾಟು ಇಲ್ಲದೆ ಸಾಲದ ಸೂಲಕ್ಕೆ ಸಿಲುಕಿದ್ದೇವೆ. ಹಬ್ಬಕ್ಕೆ ಪಟಾಕಿ ಮಾರಟ ಮಾಡಲೇಬೇಕು ಎಂದು ಅಂಗಡಿಗಳ ಮುಂದೆ ಪಟಾಕಿ ಮಾರಾಟ ಮಾಡಲು ಮುಂದಾಗಿದ್ದಾರೆ. ಶಹರ ಪೆÇಲೀಸ್ ಠಾಣೆ ಸಿಪಿಐ ಹಾಗೂ ಪುರಸಭೆ ಅವರು ಅಂಗಡಿಗಳ ಮುಂದೆ ಮಾರಾಟ ಮಾಡಲು ಇರಿಸಿದ್ದ ಪಟಾಕಿಗಳನ್ನು ಎತ್ತಿಕೊಂಡು ಹೋಗಿದ್ದರಿಂದ ರೊಚ್ಚಿಗೆದ್ದ ಅಂಗಡಿಕಾರರು ಸಂಪ್ರಾದಾಯಿಕ ಹಿಂದೂ ಹಬ್ಬ ಆಚರಣೆ ಮಾಡಲು ಪೆÇಲೀಸ್ ಅ„ಕಾರಿಗಳು ಬಿಡುತ್ತಿಲ್ಲ ಎಂದು ಹಿಂದೂಪರ ಸಂಘಟನೆ ಮುಖಂಡರಿಗೆ ತಿಳಿಸಿದ್ದಾರೆ.ಹಿಂದೂಪರ ಸಂಘಟನೆ ಮುಖಂಡರು ,ವ್ಯಾಪರಸ್ಥರು ಸೇರಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಅವರ ಬಳಿ ಹಿಂದೂಗಳ ದೊಡ್ಡ ಹಬ್ಬ ಸಂಪ್ರದಾಯಿಕವಾಗಿ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಅ„ಕಾರಿಗಳು ಕಾನೂನು ಉಲ್ಲಂಘನೆ ಆಗದಂತೆ ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ.ಅಂಗಡಿಕಾರರು ಪಟಾಕಿ ಮಾರಾಟ ಮಾಡುವಾಗ ಶಹರ ಪೆÇಲೀಸ್ ಠಾಣೆ ಸಿಪಿಐ ಅವರು ಮತ್ತೇ ಬಂದು ಪಟಾಕಿ ಮಾರಾಟ ಮಾಡದಂತೆ ಕಿರಿಕಿರಿ ಮಾಡಿದ್ದಾರೆ ಎಂದು ಅಂಗಡಿಕಾರರು,ಹಿಂದುಪರ ಸಂಘಟನೆಗಳ ಮುಖಂಡರು ದೂರಿದ್ದಾರೆ. ಹಿಂದೂಪರ ಸಂಘಟನೆಯ ಮುಖಂಡರಾದ ರಾಜಗುರು ದೇವರ, ಶಂಕರಸಿಂಗ ಹಲವಾಯಿ, ಅನೀಲ ರಾಠೋಡ, ಅನೀಲಗೌಡ ಬಿರಾದಾರ, ನಾಗರಾಜ ದಶವಂತ, ಸಂಜು ದಶವಂತ, ಚುಟ್ಟುಸಾಹುಕಾರ ಧನಶೆಟ್ಟಿ, ಕಂಠೇಪ್ಪ ಚವ್ಹಾಣ, ವಿಶಾಲ ರಾಠೋಡ, ಸತೀಶ ಕುಂಬಾರ, ರಾಮಸಿಂಗ ಕನ್ನೊಳ್ಳಿ,ಸುನೀಲಗೌಡ ಬಿರಾದಾರ, ಶಿವು ಬಿಸನಾಳ, ಪವನ ಮಠ ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.