ಹಬ್ಬದ ಮಾರಾಟಕ್ಕೆ ಅಡ್ಡಿ, ವ್ಯಾಪಾರಿಗಳಿಂದ ಪ್ರತಿಭಟನೆ

ಬೆಂಗಳೂರು.ಜ೧೩: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಹೂವು, ಸೊಪ್ಪು , ಉಡುಪ ತರಕಾರಿ ಬಟ್ಟೆ ಮಾರಾಟಕ್ಕೆ ಬಿಬಿಎಂಪಿ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಇದನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು ಹಬ್ಬದಮಾರಾಟ ವಸ್ತುಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ಪಾಲಿಕೆ ಮಾಜಿ ಸದಸ್ಯ ಏನ್ ನಾಗರಾಜು ಅಧ್ಯಕ್ಷತೆಯಲ್ಲಿ ವ್ಯಾಪಕ ಪ್ರತಿಭಟನೆ ನಡೆಯಿತು. ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧ ವ್ಯಾಪಾರಿಗಳ ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರಿಗಳು ಕಬ್ಬು, ಸೊಪ್ಪು, ಹಣ್ಣು ತರಕಾರಿ ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿ ನ್ಯಾಯಬೇಕು ಎಂದು ಘೋಷಣೆ ಕೂಗಿದರು.ರಸ್ತೆಯಲ್ಲೇ ಸೊಪ್ಪು,ತರಕಾರಿ ಹಿಡಿದು ವ್ಯಾಪಾರಿಗಳು ಕುಳಿತು ಪ್ರತಿಭಟನೆ ನಡೆಸಿದರು.ತರಕಾರಿ ಬುಟ್ಟಿಗಳನ್ನ ತಲೆಯ ಮೇಲೆ ಹೊತ್ತು ದಿಕ್ಕಾರ ಮೊಳಗಿಸಿದರು.
ನಿನ್ನೆ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಮತ್ತೆ ತೆರವು ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಕ್ರಾತಿ ಹಬ್ಬಕ್ಕೆ ನಮ್ಮ ಹೊಟ್ಟೆ ಮೇಲೆ ಹೊಡೆಯ ಬೇಡಿ ಎಂದು ವ್ಯಾಪಾರಿಗಳು ಮನವಿ ಮಾಡಿದರು.ಬಂಡವಾಳ ಹೂಡಿ ವಸ್ತುಗಳನ್ನು ತಂದಿದ್ದೇವೆ. ಆದರೆ ಮಾರಾಟ ಮಾಡಲು ಆಗುತ್ತಿರಲ್ಲ.
ಕನಿಷ್ಠ ಪಕ್ಷ ಮೂರು ದಿನಗಳ ಮಟ್ಟಿಗಾದರೂ ಅವಕಾಶ ಕೊಡಿ ಎಂದರು.