ಹಬ್ಬದೂಟ ಬಡಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ

ಹೊನ್ನಾಳಿ. ಮೇ.೧೫: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೋವಿಡ್ ಸೋಂಕಿತರಿಗೆ ಸ್ವತಃ ತಾವೇ ಹೋಳಿಗೆ ಮಾಡಿಕೊಟ್ಟಿದ್ದಾರೆ.
 ಬಸವ ಜಯಂತಿ ಹಿನ್ನಲೆ ಸೋಂಕಿತರಿಗೆ, ಕೊರೊನಾ ವಾರಿಯರ್​ಗಳಿಗೆ ಬಾಣಸಿಗನಾಗಿ ಹಬ್ಬದೂಟವನ್ನ ಎಂ.ಪಿ. ರೇಣುಕಾಚಾರ್ಯ ತಯಾರಿಸಿ, ಜಿಲ್ಲೆಯ ಹೊನ್ನಾಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಹೋಳಿಗೆ ವಿತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅಲ್ಲದೇ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೂ ಹಬ್ಬದೂಟವನ್ನ ಬಡಿಸಿದ್ದಾರೆ.