ಹಬ್ಬಗಳು ಆಚರಣೆಗೆ ಸೀಮಿತವಾಗದಿರಲಿ-ಡಾ. ಅಜಿತಪ್ರಸಾದ

ಧಾರವಾಡ ಜ.14-ಭಾರತೀಯರು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ವೈಜ್ಞಾನಿಕ ಕಾರಣಗಳಿವೆ ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ರವರು ಅಭಿಪ್ರಾಯಪಟ್ಟರು.
ಅವರು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಉದ್ಘಾಟಿಸಿ ಮಾತನಾಡುತ್ತ ನಮ್ಮ ಹಿರಿಯರು ಕಾಲಮಾನ ಹವಾಮಾನಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಆ ಸಮಯಕ್ಕೆ ಸೇವಿಸಬೇಕಾದ ಆಹಾರಗಳನ್ನು ಆ ಹಬ್ಬದಲ್ಲಿ ಸೇವಿಸುವ ಪರಿಪಾಠ ಹಾಕಿ ಮನುಷ್ಯನ ಆರೋಗ್ಯವನ್ನು ನೈರ್ಸಗಿಕವಾಗಿ ಕಾಪಾಡಿಕೊಳ್ಳುವ ಶಕ್ತಿಯನ್ನು ಕಂಡುಕೊಂಡಿದ್ದಾರೆ. ಆದರೆ ಇದೀಗ ಹಬ್ಬಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ ಹಾಗೂ ಆಚರಣೆಗೆ ಮಾತ್ರ ಸೀಮಿತವಾಗುತ್ತಿವೆ ಎಂದರು.
ಶಾಲೆಗಳಲ್ಲಿ ಈ ರೀತಿ ಹಬ್ಬಗಳನ್ನು ಆಚರಿಸಿ ಮಕ್ಕಳಿಗೆ ಹಬ್ಬದ ಮಹತ್ವ ತಿಳಿಸಿಕೊಡುವ ಕಾರ್ಯ ಆಗಬೇಕಿದೆ. ಕೋವಿಡ್ ರಜೆ ಸಂದರ್ಭದಲ್ಲಿ ನಮ್ಮ ಶಾಲಾ ಶಿಕ್ಷಕರು ತಾವೇ ಸ್ವಚ್ಚತೆಗೆ ಆದ್ಯತೆ ನೀಡಿ ರಜೆಯನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡಿದ್ದಾg.É ವಿದ್ಯಾರ್ಥಿಗಳಿಗೆ ನಾವು ಪಠ್ಯದ ಜೊತೆಗೆ ಇತರೆ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ವಿದ್ಯಾರ್ಥಿಯ ಸರ್ವೋತೋಮುಖ ಬೆಳವಣಿಗೆ ಸಾಧ್ಯ ಎಂದು ಜೆ.ಎಸ್.ಎಸ್ ಸೆಂಟ್ರಲ್ ಸ್ಕೂಲ್‍ನ ಪ್ರಾಚಾರ್ಯ ಎಸ್ ಸಾಧನಾ ಹೇಳಿದರು.
ಸೂರ್ಯದೇವ ರಥವೇರಿ ಕುಳಿತಿರುವುದು, ಬಾಗಿನ ಅರ್ಪಿಸುವುದು, ರೈತರ ರಾಶಿಸಂಭ್ರಮ ಮಕ್ಕಳಿಗೆ ಕರಿ ಎರೆಯುವ ದೃಶ್ಯಗಳು ಮನಮೋಹಕವಾಗಿದ್ದವು. ಈ ಸಂಧರ್ಭದಲ್ಲಿ ಮಹಾವೀರ ಉಪಾಧ್ಯೆ ರ್ಯಾಪಿಡ್ ಸಂಸ್ಥೆಯ ವಾಣಿ ಪುರೋಹಿತ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.