ಹಬ್ಬಗಳಿಗೆ ವೆಚ್ಚಕ್ಕೆ ಬದಲು ಮಕ್ಕಳಿಗೆ ಪುಸ್ತಕ ನೀಡಿ

ಹೊಸಕೋಟೆ, ಆ. ೫: ಹುಟ್ಟು ಹಬ್ಬಗಳ ಆಚರಣೆಗೆ ಹಣವನ್ನು ದುಂದು ವೆಚ್ಚ ಮಾಡುವ ಬದಲು. ಬಡವರಿಗೆ, ಅಥವಾ ಸರ್ಕಾರಿ ಶಾಲಾ ಮಕ್ಕಳಿಗೆ. ನೋಟ್ ಪುಸ್ತಕ. ಸಮವಸ್ತ್ರ ಅಥವಾ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿ ಎಂದು. ಬಿಜೆಪಿ ಅಲ್ಪ ಸಂಖ್ಯಾತರ ಘಟಕದ ತಾಲ್ಲೂಕು ಅದ್ಯಕ್ಷ ಅಪ್ಸರ್‌ರವರು ಮನವಿ ಮಾಡಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಬಿಜೆಪಿ ಅಲ್ಪ ಸಂಖ್ಯಾತರ ಘಟಕದ ತಾಲ್ಲೂಕು ಅದ್ಯಕ್ಷ ಎ.ಅಪ್ಸರ್‌ರವರ ಹುಟ್ಟು ಹಬ್ಬದ ಪ್ರಯುಕ್ತ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಅಪ್ಸರ್‌ರವರು. ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರು ಸಹ ಮೊದಲ ಬಾರಿಗೆ ಶ್ರೀ ಊರ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಿರಿಯರಿಂದ ಆಶೀರ್ವಾದ ಪಡೆದರು, ಬಳಿಕ ಅಲ್ಲಿನ ಬಕ್ತಾಧಿಗಳಿಗೆ ಹಾಗು ಸ್ನೇಹಿತರಿಗೆ ಅನ್ನದಾನ ಮಾಡಿದರು.
ಬಳಿಕ ಹೊಸಕೋಟೆ ನಗರದ ಸೈಲಾನಿ ಶಾ ದರ್ಗಾದಲ್ಲಿ ಮುಸ್ಲಿಂ ಗುರುಗಳಾದ ಬಾಬಾ ರವರಿಂದ ಪಾರ್ಥನೆ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದರು . ಇನ್ನು ಇದೇ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ರೋಷನ್ ಹಾಗು ನಗರಸಬೆ ಸದಸ್ಯ ಶಾಜಿಯಾ ಕಲೀಂ ಪಾಷರವರು ಅಪ್ಸರ್ ರವರಿಗೆ ಹಾರ ಹಾಕಿ ಪೇಟ ತೊಡಿಸುವ ಮೂಲಕ ಅಭಿನಂದಿಸಿ ಸನ್ಮಾನಿಸಿದರು.
ನಂತರ ತಮ್ಮ ನಿವಾಸದಲ್ಲಿ ತಂದೆ. ತಾಯಿ ಅಣ್ಣ ತಮ್ಮಂದಿರ ಜೊತೆ ಹಾಗು ಸ್ನೇಹಿತರ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಗಾಯಿತ್ರಿ ವಿದ್ಯಾಮಂದಿರ ಸುಮಾರು ೨೫ ಮಕ್ಕಳಿಗೆ ಶಾಲಾ ಬ್ಯಾಗ್, ಪರೀಕ್ಷಾ ಪ್ಯಾಡ್, ಚಾಕಲೇಟ್, ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ. ಎಸ್ ಜೆ ಆರ್ ಎಸ್ ಶಾಲಾ ಮಕ್ಕಳಿಗೆ ಡೆಸ್ಕ್‌ಗಳನ್ನು ವಿತರಿಸಿ ಎಲ್ಲಾ ಮಕ್ಕಳಿಗೆ ಲಾಡು, ಚಾಕಲೇಟ್ ಸೇರಿದಂತೆ ಸಿಹಿ ಹಂಚಿ, ಪಾರ್ವತಿಪುರದ ಅಂಗನವಾಡಿ ಮಕ್ಕಳಿಗೆ ಆಟದ ಸಾಮಗ್ರಿಗಳು, ಬೊಂಬೆಗಳಿ ಹಾಗು ಚಳಿಗಾಲದ ಅಂಗವಾಗಿ ಎಲ್ಲಾ ಮಕ್ಕಳಿಗೂ ಶಟರ್‌ಗಳನ್ನು ನೀಡಿ ಸಿಹಿ ಹಂಚಿದರು,
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ಗಣ್ಯ ವ್ಯಕ್ತಿ ಅಲ್ಲ ಆದರೂ ಸಹ ನಮ್ಮ ಸ್ನೇಹಿತರ ಒತ್ತಾಯದ ಮೇರೆಗೆ ಸರಳವಾಗಿ ಆಚರಣೆ ಮಾಡಿಕೊಂಡು. ಸಚಿವರಾದ ಎಂಟಿಬಿ ನಾಗರಾಜು ರವರ ಆಶಯದಂತೆ ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎಂದರು ಆಗಾದ್ರೆ ಅವರು ಹೇಳಿದ್ದೇನು ಅಂತಿರಾ ನೀವೇ ಒಮ್ಮೆ ಕೇಳಿ.
ಇನ್ನು ಇದೇ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ರೋಷನ್ ಹಾಗು ನಗರಸಬೆ ಸದಸ್ಯ ಶಾಜಿಯಾ ಕಲೀಂ ಪಾಷ. ವೆಂಕಟೇಶ್, ಮುಖಂಡರಾಧ ಜೈ ಕುಮಾರ್, ಮನ್ಸೂರ್, ಬಿಡ್ಡಾ, ಶಿವು, ಸೇರಿದಂತೆ ಅನೇಕ ಯುವಕರು ಮುಕಂಡರು ಹಾಜರಿದ್ದರು.