ಹಬ್ಬಗಳನ್ನು ಸರಳವಾಗಿ ಆಚರಿಸಲು ಶಾಸಕರ ಸಲಹೆ

ಹನೂರು:ಮಾ:31: ಸರ್ಕಾರದ ನಿಯಮಾನುಸಾರ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸರಳ ಸೀಮಿತ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳು, ಜಾತ್ರೆ ಹಬ್ಬಗಳ ಆಚರಣೆ ಸಂಬಂಧ ಇಂದು ಮಧ್ಯಾಹ್ನ ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬೆಟ್ಟಳ್ಳಿ ಮಾರಮ್ಮ ಜಾತ್ರೆ ಸೇರಿದಂತೆ ಏಪ್ರಿಲ್ ತಿಂಗಳಿನಲ್ಲಿ ಬಾಬು ಜಗಜೀವನ ರಾಮ್ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಗಳು ಸೇರಿದಂತೆ ಸ್ಥಳಿಯವಾಗಿ ನಡೆಯುವ ಹಬ್ಬಗಳು ಸರಳ ಸಂಪ್ರದಾಯದಂತೆ ಜರುಗುವುದರತ್ತಾ ಗಮನಹರಿಸಬೇಕು. ಕೊವೀಡ್-19 ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮಗಳ ಬಗ್ಗೆ ಒತ್ತನ್ನು ನೀಡಬೇಕು. ಸಂಪ್ರದಾಯವಾಗಿ ನಡೆಯುವ ಹಬ್ಬಗಳನ್ನು ಸರಳವಾಗಿ ಸ್ಥಳಿಯರೇ ಆಚರಿಸಬೇಕು. 5 ಮತ್ತು 14 ರಂದು ಬಾಬು ಜಗಜೀವನ್‍ರಾಂ ಹಾಗೂ ಡಾ.ಅಂಬೇಡ್ಕರ್ ಜಯಂತಿ ಆಚರಣೆಯನ್ನು ಪ್ರತಿ ಗ್ರಾ.ಪಂ. ಆಚರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಅವರಿಗೆ ಸೂಚಿಸರು. ಇದೇ ವೇಳೆ ಬೆಟ್ಟಳ್ಳಿ ಮಾರಮ್ಮ ಜಾತ್ರೆಯಲ್ಲಿ ದೊಡ್ಡ ಬಾಯಿ ಬೀಗ ಚಿಕ್ಕ ಬಾಯಿ ಬೀಗವನ್ನು 5 ರಿಂದ 10 ಮಂದಿಗಷ್ಟೇ ಅವಕಾಶ ನೀಡುವುದಕ್ಕಿಂತ ಸಂಪೂರ್ಣವಾಗಿ ನಿಷೇಧಿಸುವುದು ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕೆಲವರಿಗೆ ಅವಕಾಶ ಮಾಡಿಕೊಟ್ಟರೆ ಇನ್ನೂಳಿದ ಭಕ್ತಾಧಿಗಳಲ್ಲಿ ಅಸಮಾಧಾನ ವ್ಯಕ್ತವಾಗಬಹುದು. ಒಂದು ವೇಳೆ ಈ ಆಚರಣೆಯನ್ನು ಮಾಡಬೇಕೆಂದರೆ ದೇವಾಲಯದ ಆಡಳಿತ ಮಂಡಳಿ ಹಾಗೂ ತಹಶೀಲ್ದಾರ್ ಪೊಲೀಸರು ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಹೆಚ್.ನಾಗರಾಜು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಾಧರ್, ಪ.ಪಂ.ಮುಖ್ಯಾಧಿಕಾರಿ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ನಾಗೇಶ್, ಅಗ್ನಿಶಾಮಕ ದಳ ಠಾಣಾಧಿಕಾರಿ ಪ್ರವಿಣ್ ಹಾಗೂ ಆನಂದ್, ಗ್ರಾಮ ಲೆಕ್ಕಿಗ ಶೇಷಣ್ಣ, ಪ.ಪಂ.ಸದಸ್ಯರುಗಳು ಇದ್ದರು.