ಹಬ್ಬಗಳನ್ನು ಪ್ರೀತಿ ಉತ್ಸಾಹದಿಂದ ಆಚರಿಸಿ

ಚನ್ನಮ್ಮನ ಕಿತ್ತೂರ,ಜೂ 27: ಹೋರಾಟದ ನಾಡು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ, ರಾಣಿ ಚನ್ನಮ್ಮಾಜೀಯವರ ಪುಣ್ಯ ಭೂಮಿ ಶತಮಾನಗಳಿಂದಲೂ ಧಾರ್ಮಿಕ ಸೌಹಾರ್ದತೆ ಹಾಗೂ ಶಾಂತಿಯನ್ನು ಕಾಪಾಡಿಕೊಂಡು ಜಗತ್ತಿಗೆ ಮಾದರಿಯಾಗಿದೆ. ಎಂದು ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಪೋಲಿಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ ಪಾಲನಾ ಸಭೆಯನ್ನುದ್ದೇಶಿಸಿ ಮಾತನಾಡಿ ಕಿತ್ತೂರಿನ ಜನರ ಧಾರ್ಮಿಕ ಸೌಹಾರ್ದತೆಯನ್ನು ಕೊಂಡಾಡಿದರು.
ವ್ಯಾಟ್ಸಪ್ ಸಂದೇಶಗಳು ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ ಸಾಮಾಜಿಕ ಶಾಂತಿಯನ್ನು ಹಾಳು ಮಾಡುತ್ತಿವೆ ಅಂತಹ ಸಂದೇಶಗಳನ್ನು ನಂಬಬೇಡಿ ಯಾವ ಧರ್ಮವು ಕೂಡಾ ಅಶಾಂತಿಯನ್ನು ಹೇಳಿಕೊಡುವುದಿಲ್ಲ.
ಮುನುಷ್ಯರು ಶಾಂತಿ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಹಬ್ಬಗಳು ಮನುಷ್ಯರಲ್ಲಿ ಸಂತೋಷ ನೆಮ್ಮದಿಯನ್ನು ಮೂಡಿಸಬಲ್ಲವು ಹಬ್ಬಗಳ ಹಿಂದಿನ ಮಹತ್ವವನ್ನು ಯುವಪಿಳಿಗೆಗೆ ತಿಳಿಸಬೇಕು. ಸಮಾಜದಲ್ಲಿ ಶಾಂತಿಯುತವಾಗಿ ಬದುಕಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ನೀತಿ ಪಾಠ ಹೇಳಿದರು.
ಡಿಎಸ್ಪಿ ರವಿ ನಾಯ್ಕರ ಮಾತನಾಡಿ ಶಾಂತಿ ಮತ್ತು ಸಹೋದರರತ್ವಕ್ಕೆ ಐತಿಹಾಸಿಕ ಕಿತ್ತೂರ ನಾಡು ಹೆಸರಾದ ಊರು ಇಲ್ಲಿ ಶಾಂತ ರೀತಿಯಿಂದ ಹಬ್ಬದ ಸಂಪ್ರದಾಯ ಮುಂದುವರೆದುಕೊಡು ಬಂದಿದೆ. ಇದನ್ನು ನಾವು-ನೀವು ಶಾಂತತೆಯಿಂದ ಕಾಪಾಡಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅಬ್ದು¯ಗಪಾರ್ ಗಡ್ಕರಿ, ಹನಮಂತ ಲಗೋಟಿ, ದೀನೇಶ ಒಳಸಂಗ, ಇಕ್ಸಾಲ್ ಸಂಗೋಳ್ಳಿ ಮಾತನಾಡಿದರು. ಪ.ಪಂ ಸದಸ್ಯ ಎಫ್.ಎಂ. ಜಕಾತಿ, ಯಲ್ಲಪ್ಪ ವಕ್ಕುಂದ, ಅಶಪಾಕ ಹವಾಲ್ದಾರ, ಎಂ.ಎಂ. ರಾಜೀಬಾಯಿ, ಬಸವರಾಜ ಭಂಗಿ, ಜಗದೀಶ ವಸ್ತ್ರದ, ಪತ್ರಕರ್ತರು, ಪೋಲಿಸ್ ಸಿಬ್ಬಂದಿ, ಸಾರ್ವಜನಿಕರಿದ್ದರು. ಸಿಪಿಐ ಮಹಾಂತೇಶ ಹೊಸಪೇಟ ಸ್ವಾಗತಿಸಿದರು, ನೂತನ ಪಿಎಸ್‍ಐ ಪ್ರವೀಣ ಗಂಗೋಳ ನಿರೂಪಿಸಿದರು.