ಹಬ್ಬಕ್ಕೆ ಸಿದ್ದಗೊಳ್ಳುತ್ತಿರುವ ಗಣೇಶನ ಮೂರ್ತಿಗಳು


ಸಂಜೆವಾಣಿ ವಾರ್ತೆ
ಸಂಡೂರು:ಸೆ: 2:  ಇದೇ ತಿಂಗಳಿನಲ್ಲಿ ಆಚರಿಸಲ್ಪಡುವ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಹಬ್ಬದಂದು ಪ್ರತಿಷ್ಠಾಪನೆಯಾಗುವ ಸಲುವಾಗಿ ತರಹೇವಾರಿ ಗಣೇಶನ ಮೂರ್ತಿಗಳು ಸಿದ್ದಗೊಳ್ಳುತ್ತಿವೆ. ತಂದೆ, ಅಜ್ಜನ ಕಾಲದಿಂದಲೂ ಅಚ್ಚು ಬಳಸದೇ ಕೈಯಲ್ಲಿಯೇ ಮಣ್ಣಿನ ಮೂರ್ತಿಗಳನ್ನು ತಯಾರಕಲೊಬ್ಬರಾದ ರಾಘವೇಮದ್ರ ಆಚಾರ್ ಅವರ ಹೃದಯ ತುಂಬಿದ ಮಾಥುಗಳಿವು.
ಸಂಡೂರಿನಲ್ಲಿ ಹಲವಾರು ಕುಟುಂಬಗಳು ಹಲವು ವಂಶಪಾರಂಪರ್ಯವಾಗಿ ವಿಗ್ರಹಗಳನ್ನು ತಯಾರಿಸುತ್ತಾ ಬಂದಿವೆ ಈಗಾಗಲೇ ವಿವಿಧ ಯುವಕ ಸಂಘದವರು ಗಣೇಶನ ಪ್ರತಿಷ್ಠಾಪನೆಗೆ ತಮಗೆ ಮನಬಂದ ರೀತಿಯಲ್ಲಿ ಮಾದರಿಯ ವಿಗ್ರಹಗಳನ್ನು ನಿರ್ಮಿಲಸು ವಿಗ್ರಹ ತಯಾರಿಕರಿಗೆ ತಿಳಿಸಿರುವುದು ವಿಶೇಷವಾಗಿದೆ. ವಿವಿಧ ಯುವಕ ಸಂಘದವರ ಅಭಿಪ್ರಾಯದಂತೆಯೇ ವಿಗ್ರಹಗಳು ಸಿದ್ದವಾಗುತ್ತವೆ. ಬೀದಿ ಬದಿಯಲ್ಲಿ ಸಣ್ಣ ಮಕ್ಖಲು ಮೂರ್ತಿಗಳನ್ನು ನಿರ್ಮಿಸುವ ಸ್ಥಳಗಳಿಗೆ ಭೇಟಿ ನೀಡಿ ಸಂತೋಷ ಪಡುವುದರ ಜೊತೆಗೆ ತಮ್ಮ ಬೀದಿಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಚಿಂತನೆಯನ್ನು ನಡೆಸತೊಡಗಿದ್ದಾರೆ.
ವಿಚಿತ್ರ ಬೇಡಿಕೆ: ಜಲಮಾಲಿನ್ಯ ತಡೆಗಾಗಿ ಈಗಾಗಲೇ ಪಿ.ಓ.ಪಿ. ಗಣೇಶನ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದೆ. ಜಾಗೃತರಾಗುವ ಜನತೆ ಹೆಚ್ಚಾಗಿ ಪರಿಸರ ಸ್ನೇಹಿ,ಗಣೇಶನ ಮೂರ್ತಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ತಯಾರಕರು ಸಹ ಇತ್ತೀಚಿನ ದಿನಗಳಲ್ಲಿ ಅಯಿಲ್ ಪೇಂಟ್‍ಗಿಂತ ವಾಟರ್ ಪೇಂಟನ್ನು ಬಳಸುತ್ತಿದ್ದಾರೆ. ಯವುದೇ ಬಣ್ಣ ಹಚ್ಚದೇ ಗಣೇಶನ ಮೂರ್ತಿಗಳನ್ನು ತಯಾರಿಸಲು ಅರ್ಡರ ಮಾಡಿದವರು ವಿಶೇಷ ಶೇ: 30 ರಷ್ಟು ಜನ ಬಣ್ಣ ಹಚ್ಚದ ಗಣೇಶ ಮೂರ್ತಿಗಳಿಗೆ ಅರ್ಡರ್ ಮಾಡಿದ್ದಾರೆ. ಸನಾವು ಜನರ ಬೇಡಿಕೆಗೆ ತಕ್ಕಂತೆ ಮೂರ್ತಿಗಳನ್ನು ತಯಾರುಸುತ್ತಿದ್ದೇವೆ, ಗಣೇಶನ ಪ್ರತಿಷ್ಠಾಪನೆಗೆ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ ವರಣನ ಕೃಪೆ ಕಟಾಕ್ಷದ ಬಲದಿಂದ ಉತ್ತಮ ಮಳೆಯಾದರೆ ಹಬ್ಬದಲ್ಲಿ ಜನರ ಉತ್ಸಾಹ ಇಮ್ಮಡಿ ಮುಮ್ಮಡಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲದಂತಾಗಿದೆ.