ಹಬೋಹಳ್ಳಿ :ಹಿಂದೂ ಮುಸ್ಲಿಂ ಭಾವೈಕ್ಯದ ಮೊಹರಂ ಆಚರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.30 ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಹಿಂದೂ ಮುಸ್ಲಿಮರು ಸೇರಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಶನಿವಾರ ಮೆರವಣಿಗೆ ಮೂಲಕ ಆಚರಿಸಲಾಯಿತು.
ಹುತಾತ್ಮರ ಸ್ಮರಿಸುವುದರೊಂದಿಗೆ  ಸಾಮರಸ್ಯ ಮತ್ತು ಭಾವೈಕ್ಯ ಬೆಸೆಯುವ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಮರು ಸೇರಿಕೊಂಡು ಆಚರಿಸುವುದು ವಿಶೇಷ ಐದು ದಿನಗಳವರೆಗೆ ಪೀರಲ ದೇವರುಗಳನ್ನು ಕೂರಿಸಿ ಅಲಾಯಿ ದೇವರಿಗೆ ವೃತ್ತಾಕಾರದಲ್ಲಿ ಕುಣಿ ತೆಗೆದು ಹರಕೆ ಹೊತ್ತು ನೂರಾರು ಯುವಕರು ಶುಕ್ರವಾರ ರಾತ್ರಿ ಅಗ್ನಿಕುಂಡಕ್ಕೆ ಬೆಂಕಿ ಹಾಕುವ ಮೂಲಕ ಮಹಿಳೆಯರು ದೇವರಿಗೆ ಸಕ್ಕರೆ ಅರ್ಪಿಸಿ ಭಕ್ತಿ ಮೆರೆದರು. ಯುವಕರು ಹುಲಿ ವೇಷ ಹಿಡಂಬಿ ವೇಷ  ಪಟ್ಟು ಮನೆ ಮನೆಗೆ ಹೋಗಿ ಕುಡಿದು ತಮ್ಮ ಹರೇಕೆಯನ್ನು ತೀರಿಸಿದರು. ಶನಿವಾರ ಮಧ್ಯಾಹ್ನ ಪೀರಲ ದೇವರ ಮೆರವಣಿಗೆಯನ್ನು ಯುವಕರು ಹಲಗೆ ಮತ್ತು ಸಮಾಳ  ಬಡಿತ ಕುಣಿಯುವ ಮೂಲಕ ಭಕ್ತಿ ಅರ್ಪಿಸಿದರು. ದೇವರಿಗೆ ಹರಕೆ ಹೊತ್ತು ಮಹಿಳೆಯರು ಮಕ್ಕಳು ದೀಡು ನಮಸ್ಕಾರ ಹಾಕಿದರು.