ಹಬೋಹಳ್ಳಿ :ಹಿಂದೂ ಮಹಾಗಣಪತಿ ವಿಸರ್ಜನೆಯ ಅದ್ದೂರಿ ಮೆರವಣಿಗೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.10 ಪಟ್ಟಣದ ಪಾದಗಟ್ಟಿ ಆಂಜನೇಯ ದೇವಸ್ಥಾನದ ಹಿಂದೂ ಮಹಾಗಣಪತಿ ವಿಸರ್ಜನೆಯ ಮೆರವಣಿಗೆ ಶುಕ್ರವಾರ ತಡರಾತ್ರಿ ವರೆಗೂ ಅದ್ದೂರಿಯಾಗಿ ಜರುಗಿತು.
ಮಧ್ಯಾಹ್ನ  1:00 ಗಂಟೆಗೆ ಪಾದಗಟ್ಟಿ ಆಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ  ಹೊರಟ ಮೆರವಣಿಗೆ ಕೂಡ್ಲಿಗಿ  ಸರ್ಕಲ್ ಸಿನಿಮಾ ಸರ್ಕಲ್, ಬೈಪಾಸ್ ಸರ್ಕಲ್, ಬಸವೇಶ್ವರ ಸರ್ಕಲ್, ಕಿತ್ತೂರಾಣಿ ಚೆನ್ನಮ್ಮ ಸರ್ಕಲ್, ಮೂಲಕ ವಿಸರ್ಜನೆಗೆ ಹೊರಟಿತು.
ಮೆರವಣಿಗೆಯಲ್ಲಿ  ಸಾವಿರಾರು ಜನ ಸೇರಿ ಡಿಜೆ ಹಾಡುಗಳಿಗೆ ಮೈಮರೆತು ಹೆಜ್ಜೆಹಾಕುತ್ತ ಯುವಕರು ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶಿವಾಜಿ ಕೂಗಿದರು. ಮೆರವಣಿಗೆಯಲ್ಲಿ ರಾಜರತ್ನ ಅಪ್ಪು ಪ್ರಧಾನಿ ಮೋದಿ ವೀರ ಸಾರ್ವರ್ಕರ್ ಚಿತ್ರಗಳು ರಾರಾಜಿಸುತ್ತಿದ್ದವು. ಕೂಡ್ಲಿಗಿ ಸರ್ಕಲ್ ಬಳಿ ಸುಮಾರು 2 ಗಂಟೆಗಳ ಕಾಲ  ಕುಣಿದು ಕುಪ್ಪಳಿಸಿದರು. ವಾದ್ಯಗಳಾದ ಹುಲಿಕುಣಿತ, ಕೋಲಾಟ, ಡೊಳ್ಳು ಕುಣಿತ, ನಂದಿಕೋಲು ಸಮಳ, ವೇಷಗಾರರು, ಹಲವಾರು ಕಲಾವಿದರ ಕುಣಿತ ನೋಡಿ ಜನರು ಕಣ್ತುಂಬಿಕೊಂಡರು.
ವಿಸರ್ಜನಾ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಡೀ ಜಿಲ್ಲೆಯ ಪೊಲೀಸರು ಪಟ್ಟಣದಲ್ಲಿ ಮೊಕ್ಕಾಂ   ಹೂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಎಸ್ಪಿ ಕೆ ಅರುಣ್ ಹಾಗೂ ಡಿವೈಎಸ್ಪಿ, ಸಿಪಿಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಹತ್ತು ಗಂಟೆ ಆಗುತ್ತಿದ್ದಂತೆ ಡಿಜಿ ಬಂದು ಮಾಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಶಾಸಕ ನೇಮಿರಾಜ್ ನಾಯ್ಕ್, ಮುಖಂಡರಾದ ಬಲ್ಲಾಹುಣಿಸಿ ರಾಮಣ್ಣ, ಮಲ್ಲಿಕಾರ್ಜುನ  ನಾಯ್ಕ್, ಭರತ್, ರಾಜು ಪಾಟೀಲ್, ಬಡಿಗೇರ ಬಸವರಾಜ, ಸಂದೀಪ್, ಎಚ್ಎಂ, ವಿಜಯಕುಮಾರ್, ಪುರಸಭೆ  ಸದಸ್ಯರಾದ ಗಂಗಣ್ಣ ಬಿ, ನವೀನ್, ಜೋಗಿ ಹನುಮಂತ, ನಾಗರಾಜ್ ಜನ್ನು, ದೀಪಕ್, ಹಿಂದೂ ಮಹಾಸಭಾದ ಮುಖಂಡ ನಾಗರಾಜ, ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

Attachments area