ಹಬೋಹಳ್ಳಿ : ಸರತಿ ಸಾಲಿನಲ್ಲಿ ನಿಂತು ಮತದಾರರಿಂದ ಮತದಾನ

Oplus_0


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ.07 ಪಟ್ಟಣದಲ್ಲಿ ಬೆಳಗಿನಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಕಂಡು ಬಂದಿತು.
 ಕ್ಷೇತ್ರದಲ್ಲಿ ಒಟ್ಟು 252 ಬೂತುಗಳಿದ್ದು ಪ್ರತಿಯೊಂದು ಬೂತುಗಳಲ್ಲಿ ಚುನಾವಣೆ ಆಯೋಗ ಕಟನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್ ನಿಷೇಧ ಸೇರಿದಂತೆ 100 ಮೀಟರ್ ದೂರದಲ್ಲಿ ಅಭ್ಯರ್ಥಿಗಳ ಪರ ಪಕ್ಷದ ಕಾರ್ಯಕರ್ತರು ಮತದಾರರಲ್ಲಿ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳಬಹುದು. ಅಭ್ಯರ್ಥಿಗಳ ಪರ  ಪಕ್ಷದ ಕಾರ್ಯಕರ್ತರು ಹಣದ ಆಮಿಷ ನೀಡಿ ಮತ ಚಲಾಯಿಸುವಂತೆ  ಕೇಳಿಕೊಳ್ಳುತ್ತಿದ್ದರು.
 18 ವರ್ಷ ಮೇಲ್ಪಟ್ಟ ನವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮ ಪಟ್ಟರು.
 ಐದು ವರ್ಷಕ್ಕೆ ಒಮ್ಮೆ ನಡೆಯುವ ಲೋಕಸಭಾ ಚುನಾವಣೆ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ತರಬೇಕು ಎಂಬುವುದು ನಿರ್ಧರಿಸುವ ಹಕ್ಕು ಮತದಾರರಿಗೆ ನೀಡಲಾಗಿದೆ.
 ಕ್ಷೇತ್ರದಲ್ಲಿ ನೋಡುವುದಾದರೆ ಇಲ್ಲಿ ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಪಕ್ಷದ ಶಾಸಕ ಕೆ ನೇಮಿರಾಜ್ ನಾಯ್ಕ್ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಹಗಲು ರಾತ್ರಿ ಎನ್ನದೆ ಅಭ್ಯರ್ಥಿಯ ಪರ ಪ್ರಚಾರ ಮತ್ತು ಮತದಾರರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಾ ಕ್ಷೇತ್ರದ ತುಂಬಾ ಓಡಾಡಿ ಶ್ರಮ ಪಟ್ಟಿದ್ದಾರೆ. ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚುನಾವಣೆಯಲ್ಲಿ ಉತ್ಸಾಹ ಅಷ್ಟೊಂದು ಕಂಡು ಬಂದಿಲ್ಲ ಯಾಕೋ ಒಂಥರಾ ಮಂಕಾಗಿರುವುದು ಕಂಡು ಬಂದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಜಿಲ್ಲೆ ಸೇರಿದಂತೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದಿರುವುದೇ  ಪಕ್ಷದ ಕಾರ್ಯಕರ್ತರಲ್ಲಿ ನಿರುತ್ಸಾಹ ಎದ್ದು ಕಾಣುತ್ತಿತ್ತು.
 ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಶಾಸಕ ಎಸ್ ಭೀಮ ನಾಯ್ಕ್ ಸೋಲಿನಿಂದ ಗಾಯಗೊಂಡಿರುವ ಹುಲಿಯಂತೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ತಂದು ಕೊಡಬೇಕು  ಎಂದು  ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಓಡಾಡಿದ್ದಾರೆ.
 ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತೆ ನೇರ ಹಣಾಹಣಿ ನಡೆದಿದ್ದು . ಇಲ್ಲಿ ಕಾಂಗ್ರೆಸ್ ಗ್ಯಾರಂಟಿಯೋ.. ಮೋದಿ ಗ್ಯಾರಂಟಿಯೋ… ಎಂಬುವುದು ಕಾದು ನೋಡಬೇಕು.