ಹಬೋಹಳ್ಳಿ :ಸಂಸದ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ರೈತ ಸಂಘ ಧರಣಿ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.06 ಮಹಿಳಾ ಕುಸ್ತಿ ಪುಟಗಳ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಇವರನ್ನು ಬಂಧಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ತಹಶೀಲ್  ಕಚೇರಿ ಎದುರು ಸೋಮವಾರ  ಧರಣಿ ನಡೆಸಿದರು.
 ರಾಜ ರೈತ ಸಂಘದ ಕಾರ್ಯಾಧ್ಯಕ್ಷ ಜೆಎಂ ವೀರಸಂಗಯ್ಯ ಮಾತನಾಡಿ ದೇಶದ ಮಹಿಳಾ ಕುಸ್ತಿಪಟುಗಳ ಮೇಲೆ ಸಂಸದರು ಲೈಂಗಿಕ ಕಿರುಕುಳ ನೀಡುವ ಮೂಲಕ ಮಹಿಳೆಯರ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಇದು ವಿಷಾದನೀಯ ಈ ರೀತಿ ದೊಡ್ಡವರೇ ವರ್ತಿಸಿದರೆ  ಇವರನ್ನು ಶಿಕ್ಷೆಸುವ  ಕೆಲಸವಾಗಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ನ್ಯಾಯ ಒದಗಿಸದೆ ಸರಿಯಾಗಿ ಸ್ಪಂದಿಸುತ್ತಿಲ್ಲ ಕೂಡಲೇ ಸಂಸದ ಬ್ರಿಜ್  ಭೂಷಣ್ ಅವರನ್ನು ಬಂಧಿಸಿ  ನ್ಯಾಯಾಂಗದ ವಶಕ್ಕೆ ಒಪ್ಪಿಸಬೇಕು ಎಂದು ಅಗ್ರಹಿಸಿದರು.
 ತಹಸೀಲ್ದಾರ್ ಚಂದ್ರಶೇಖರ್ ಗಾಳಿ ಇವರಿಗೆ ಮನವಿ ಸಲ್ಲಿಸಿದರು.
 ಸಂಘದ ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ, ತಾಲೂಕ ಅಧ್ಯಕ್ಷ ಹರಟೆ ಕಾಳಪ್ಪ ಮುಖಂಡರಾದ ಬಿ ಯಮನೂರಪ್ಪ ಎ ಪಂಪಾಪತಿ ಹೆಚ್ಚು ಮಹೇಶ್ ಬಸಪ್ಪ ಎಚ್ ವೀರಣ್ಣ ರವಿಕುಮಾರ್ ತಂಬ್ರಹಳ್ಳಿ, ಮೆಹಬೂಬ್ ಸಾಬ್ ನಾಗರಾಜ್ ಎನ್ ವೀರಣ್ಣ ಕಿತ್ತೂರ್ ನಾಗರಾಜ್ ಮಹೇಶಪ್ಪ ಶೇಖರಪ್ಪ ಗುರು ಬಸವರಾಜ್ ಇತರರಿದ್ದರು.