ಹಬೋಹಳ್ಳಿ : ಸಂವಿಧಾನ ಜಾಗೃತಿ ಜಾಥಾಕ್ಕೆ  ಅದ್ದೂರಿ ಸ್ವಾಗತ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :0ಫೆ.06 ಸಂವಿಧಾನಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಿರಿಯರು ಮಹಿಳೆಯರು ಮಕ್ಕಳು ಹಾಗೂ ಸಮಸ್ತ ನಾಗರಿಕರಿಗೆ ನೀಡಿರುವ ಹಕ್ಕು ಕರ್ತವ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಘನ ಕರ್ನಾಟಕ ಸರ್ಕಾರವು ಹಮ್ಮಿಕೊಂಡಿದೆ
ವಿಜಯನಗರ ಜಿಲ್ಲೆಯಲ್ಲಿ ಸದರಿ ಸಂವಿಧಾನ ಜಾಥಾವು ದಿನಾಂಕ 26 ಜನವರಿ ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರಿಂದ ಚಾಲನೆ ನೀಡಿದ್ದರು
ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕ ಆಡಳಿತದಿಂದ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಸೋಮವಾರ ಅದ್ದೂರಿ ಸ್ವಾಗತ ದೊರೆಯಿತು.
ಮರಬ್ಬಿಹಾಳು ಹಂಪಾಪಟ್ಟಣ  ಹಲಗಾಪುರ ದಶಮಾಪುರ ಹನಸಿ, ಮಾದೂರು ವಲ್ಲಭಾಪುರ ಬೆಣಕಲ್ಲು  ಮಾಲವಿ ಹಾಗೂ ನೆಲ್ಲುಕುದುರೆ ಗ್ರಾಮಗಳಲ್ಲಿ ಅತ್ಯಂತ ಅದ್ದೂರಿಯಾಗಿ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಸಡಗರ ಸಂಭ್ರಮದಿಂದ ಜಾಥಾವನ್ನು ಬರಮಾಡಿಕೊಂಡು ಕಾರ್ಯಕ್ರಮಗಳನ್ನು ನಡೆಸಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವುದರ ಮೂಲಕ ಸಂವಿಧಾನದ ಮೌಲ್ಯಗಳನ್ನು ತಿಳಿದುಕೊಂಡರು
 ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ, ತಾ ಪಂ ಕಾರ್ಯನಿರ್ವಾಧಿಕಾರಿ ಜಿ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಉಪ ತಹಶೀಲ್ದಾರ್  ಶಿವಕುಮಾರ್ ಗೌಡ, ಬಿಸಿಎಂ ಅಧಿಕಾರಿ ವಿ ರಮೇಶ್, ಮುಖಂಡರಾದ ದೊಡ್ಡಬಸಪ್ಪ ಕಹಳೆ ಬಸವರಾಜ್, ಮೈಲಾರಪ್ಪ, ಇತರರಿದ್ದರು.