ಹಬೋಹಳ್ಳಿ :ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜ.05 ಪಟ್ಟಣದ ಬಸವೇಶ್ವರ ವೃತ್ತದ ಬಳಿ ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ನಡೆದಾಡುವ ದೇವರು ಎಂದೆ ಪ್ರಖ್ಯಾತ ಹೊಂದಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಲಿಂಗೈಕರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.
 ಕುರುಬ ಸಮಾಜದ ತಾಲೂಕ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ದೇಶ ಕಂಡ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಸ್ವಾಮೀಜಿ ಇಂದು ನಮ್ಮನ್ನೆಲ್ಲ ಆಗಲಿ ಹೋಗಿದ್ದಾರೆ ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದರು ತಪ್ಪಲ್ಲ. ಅವರು ಜೀವನ ಸರಳ ಮತ್ತು ಪ್ರಮಾಣಿಕತೆಯಿಂದ ಕೂಡಿತ್ತು. ಯಾವುದೇ ಪ್ರಶಸ್ತಿ ಹುಡುಕಿಕೊಂಡು ಬಂದರು ನಯವಾಗಿ ತಿರಸ್ಕರಿಸಿ ಮಹಾನ್ ಆದರ್ಶ ವ್ಯಕ್ತಿಯಾಗಿ ಬದುಕಿದವರು ಅವರ ಆದರ್ಶಗಳನ್ನು ನಾವು ಮೈಗೂಡಿಸಬೇಕು ಎಂದರು.
 ವೀರಶೈವ ಪಂಚಮಸಾಲಿ ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಮಾತನಾಡಿ ರಾಜ್ಯ ಮತ್ತು ದೇಶ ಕಂಡ ಅತ್ಯಂತ ಸರಳವಾದ ಸ್ವಾಮೀಜಿ ಎಂದರೆ ಅದು ಸಿದ್ದೇಶ್ವರ ಸ್ವಾಮೀಜಿ ಮಾತ್ರ ಅವರ ಜೀವನದುದ್ದಕ್ಕೂ ಪ್ರವಚನ ಮತ್ತು ಬದುಕಿಗೆ ಹತ್ತಿರವಾಗುವಂತಹ ಸಂದೇಶಗಳನ್ನು ನೀಡುತ್ತಿದ್ದರು ಎಂದರು.
 ಮುಖಂಡರಾದ ದೊಡ್ಡರಾಮಣ್ಣ, ಸಿ. ಬಸವರಾಜ್  ಕನ್ನಿಹಳ್ಳಿ  ಚಂದ್ರಶೇಖರ್ ನಾಗರಾಜ್ ಮಾತನಾಡಿದರು.
 ಗದಿಕೇರಿ ಚರಂತೇಶ್ವರ ಸ್ವಾಮೀಜಿ ಹಾಲಸ್ವಾಮಿ ಮಠದ ಹಾಲು ಸಿದ್ದೇಶ್ವರ ಸ್ವಾಮೀಜಿ, ಹೆಚ್. ಸೋಮಲಿಂಗಪ್ಪ ಹೆಗ್ಡಾಳ್ ರಾಮಣ್ಣ, ಎಚ್ಎ ಕೊಟ್ರೇಶ್, ಚಿತ್ತವಾಡಗಿ ಪ್ರಕಾಶ್, ಮಧುಸೂದನ್, ಮುಟಗನಹಳ್ಳಿ ಕೊಟ್ರೇಶ್, ಹಂಚಿನ ಮನೆ ರಮೇಶ್, ಇತರರಿದ್ದರು