ಹಬೋಹಳ್ಳಿ : ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ  176ನೇ ಶಾಖೆ ಪ್ರಾರಂಭ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಅ.09 ಪಟ್ಟಣದ ಬಸವೇಶ್ವರ ಬಜಾರದ ಕರ್ನಾಟಕ ಬ್ಯಾಂಕ್ ಪಕ್ಕದಲ್ಲಿ ನೂತನವಾಗಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸೈಟಿ 176 ನೇ ಶಾಖೆಯನ್ನು ಶಾಸಕ ಕೆ ನೇಮಿರಾಜ್ ನಾಯ್ಕ್ ಭಾನುವಾರ  ಉದ್ಘಾಟಿಸಿದರು.
ನಂತರ ಮಾತನಾಡಿ ಇಂದಿನ ದಿನಮಾನಗಳಲ್ಲಿ ಬ್ಯಾಂಕ್ ಜೊತೆ ಕೋ ಆಪ್ ಕ್ರೆಡಿಟ್ ಸೊಸೈಟಿ ಗಳು ಸ್ಪರ್ಧಾತ್ಮಕವಾಗಿ ಕೆಲಸ ಮಾಡುತ್ತಿವೆ. ಈಗಾಗಲೇ ಗ್ರಾಹಕರ ಮೆಚ್ಚುಗೆಯನ್ನು ಪಡೆದಿರುವ ಶ್ರೀ ಬೀರೇಶ್ವರ ಶಾಖೆಗಳು ರಾಜ್ಯದಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತಿವೆ. ತಾಲೂಕಿನಲ್ಲಿ ನೂತನವಾಗಿ ಆರಂಭವಾಗಿರುವ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸೈಟಿ  ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ಶ್ರಮದಿಂದ ಗ್ರಾಹಕರ ಮೆಚ್ಚುಗೆ ಪಡೆಯಲಿ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹಂಪಸಾಗರ, ಹಾಲಸಿದ್ದೇಶ್ವರ ಸ್ವಾಮೀಜಿ ಹಾಲ ಶಂಕರ ಮಠ, ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಚನ್ನಬಸನಗೌಡ ಬಿಜೆಪಿ ಜಿಲ್ಲಾಧ್ಯಕ್ಷರು, ಬಲ್ಲಾ ಹುಣಸಿ ರಾಮಣ್ಣ  ಬಿಜೆಪಿ ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬದಾಮಿ ಮೃತ್ಯುಂಜಯ, ಹೊಳಗುಂದಿ ಶೇಖರಪ್ಪ, ಚಿತ್ವಾಡಗಿ ಪ್ರಕಾಶ್ , ಬಿಜಿ ಬಡಿಗೇರ್ ಹೋಟೆಲ್ ಸಿದ್ದರಾಜು, ಜಿಂಕೆರೀ ಕರಿಬಸವರಾಜ್, ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯ  ವ್ಯವಸ್ಥಾಪಕ ಮಹಾಂತೇಶ್ ಹುಂಡರಗಿ, ಸಿಬ್ಬಂದಿಗಳಾದ ಮಹಾಂತೇಶ್ ಗರಗ, ಮಚೇಂದ್ರ ಎಕ್ಕುಂಡಿ, ಅಶೋಕ್ ಕುಂಬಾರ, ಇದ್ದರು ನಿರೂಪಣೆಯನ್ನು ನಿವೃತ್ತ ಪ್ರಾಚಾರ್ಯರಾದ ಚಂದ್ರಮೌಳಿ ನಿರ್ವಹಿಸಿದರು .