ಹಬೋಹಳ್ಳಿ : ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.25 ಶಿಕ್ಷಕ ದಿನಾಚರಣೆಯನ್ನು ಸಪ್ಟಂಬರ್ 5ರಂದು ಅದ್ದೂರಿಯಾಗಿ ಮತ್ತು ಶಿಷ್ಟಾಚಾರದಂತೆ ಆಚರಿಸಲಾಗುವುದು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ ತಿಳಿಸಿದರು.
ಪಟ್ಟಣದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಯಂತಿ ದಿನ ತಾಲೂಕಿನ ಎಲ್ಲಾ ಶಿಕ್ಷಕರು  ಕಡ್ಡಾಯವಾಗಿ ಹಾಜರಿರಬೇಕು ಅನುದಾನ ಮತ್ತು ಅನುದಾನ ರಹಿತ ಶಿಕ್ಷಕರು ಕೂಡ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಕಾರ್ಯಕ್ರಮದಲ್ಲಿ ಪ್ರತಿ ಸಾರಿ ನಿರ್ವಹಣೆ ಮಾಡಿದವರು ಈ ಬಾರಿ ಮಾಡುವಂತಿಲ್ಲ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಡಕ್ಕಾಗಿ ಹೇಳಿದಾಗ ಕೆಲವರಿಗೆ ಇರುಸು ಮುರುಸು ಉಂಟಾಗಿ  ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಶಾಸಕರು ಹಿಂದೆ ಏನಾಗಿದೆ ನನಗೆ ಗೊತ್ತಿಲ್ಲ ನಾನು ಅದನ್ನು ಒಪ್ಪುವುದಿಲ್ಲ ಈ ಬಾರಿ ಶಿಷ್ಟಾಚಾರದಿಂದ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಯಾರನ್ನು ಮೆಚ್ಚಿಸಲು ಕಾರ್ಯಕ್ರಮ ಮಾಡುವಂತಿಲ್ಲ. ಗುರುಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಾಗಿರುತ್ತದೆ. ಅಚ್ಚು  ಕಟ್ಟಾಗಿ ಕಾರ್ಯಕ್ರಮ ನಿರ್ವಹಿಸುವ ಮೂಲಕ ಇತರ  ತಾಲೂಕಿಗೆ ಮಾದರಿಯಾಗಬೇಕು ಎಂದು ಸೂಚಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಸಮಿತಿಗಳನ್ನು ರಚಿಸಲಾಗುವುದು. ನನಗೆ ಯಾವುದೇ ಜವಾಬ್ದಾರಿ ಕೊಟ್ಟವರು ನಾನು ನಿರ್ವಹಿಸಲು ಸಿದ್ಧ ಎಂದು ಭರವಸೆ ನೀಡಿದರು. ಶಿಕ್ಷಕ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಾಲೂಕು ಕಾ ನಿ ಪ ಅಧ್ಯಕ್ಷ ಉಮಾಪತಿ ಶೆಟ್ಟರ್ ತಿಳಿಸಿದರು.. ಇದರ ಬಹುಮಾನ ಮತ್ತು ಪ್ರಶಸ್ತಿಯನ್ನು ತಾಲೂಕ ನೌಕರ ಸಂಘದ  ವತಿಯಿಂದ ನೀಡಲಾಗುವುದು ಎಂದು ಅಧ್ಯಕ್ಷ ಎಂಪಿಎಂ ಮಂಜುನಾಥ್ ಹೇಳಿದರು.
 ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್  ಬೇವೂರ್, ತಾಪಂ ಇಓ ಜಿ. ಪರಮೇಶ್ವರಪ್ಪ, ದೈಹಿಕ ಪರಿವಿಕ್ಷಕ ಕೊಟ್ರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕಪ್ಪ, ಮುಖ್ಯೋಪಾಧ್ಯಯರ ಸಂಘದ ಕೃಷ್ಣನಾಯ್ಕ್, ವಿವಿಧ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಮಾಲ್ವಿ ಚಂದ್ರಪ್ಪ, ಇಟ್ಟಿಗಿ ಮಂಜುನಾಥ್, ದಾದಾಭಿ, ಬಿ.ಕೊಟ್ರಪ್ಪ, ನಿವೃತ್ತ ಶಿಕ್ಷಕರ ಪ್ರಮುಖರಾದ ಕೊಟ್ರಗೌಡ, ನಿವೃತ್ತ ಸಿದ್ದಯ್ಯ ಮೇಷ್ಟ್ರು , ಭಾಗವಹಿಸಿದ್ದರು.
ಕ್ಷೇತ್ರ ಸಂಪನ್ನೂಲ ಕೇಂದ್ರದ ಮುಸ್ತಾಕ್ ಆಹ್ಮದ್ ನಿರ್ವಹಿಸಿದರು.

One attachment • Scanned by Gmail