ಹಬೋಹಳ್ಳಿ : ಶಿಕ್ಷಕರನ್ನು ಬಿ ಎಲ್ ಒ ಕಾರ್ಯದಿಂದ ಮುಕ್ತಿಗೊಳಿಸಲು ಮನವಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.28 ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿ ಎಲ್ ಓ ಕಾರ್ಯದಿಂದ ಮುಕ್ತಿಗೊಳಿಸುವಂತೆ ಹಾಗೂ ಗಳಿಕೆ ರಜ ಮುಂಜೂರು ಮಾಡುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು
ಪಟ್ಟಣದ ತಹಸೀಲ್ ಕಚೇರಿ ಬಳಿ ಉಪ ತಹಸಿಲ್ದಾರ್ ವಿಶ್ವೇಶ್ವರಯ್ಯ ಗೆ  ಮನವಿ ಸಲ್ಲಿಸಿ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ ಮಾತನಾಡಿ ಶಿಕ್ಷಕರನ್ನು ಬಿ ಎಲ್ ಒ ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಾಲಾ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಇದರಿಂದ ಶಿಕ್ಷಕರನ್ನು ಬಿ ಎಲ್ ಓ ಕೆಲಸದಿಂದ ಮುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ ಕೊಟ್ರಪ್ಪ ಖಜಾಂಚಿ ಟಿ ಸೋಮಶೇಖರ್, ಇಟಗಿ ಮಂಜುನಾಥ್ ಕೆ. ಎಂ.ನಿರ್ಮಲಾ, ಶಾಂತಕುಮಾರಿ ಸುರೇಶ್ ಮಲ್ಲಿಕಾರ್ಜುನ್ ಹುಸೇನ್ ಭಾಷಾ ದಾದೀಬಿ ಇದ್ದರು

One attachment • Scanned by Gmail