ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಜೂ.02 ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಇಂದು ಶಾಸಕ ಕೆ ನೇಮಿರಾಜ್ ನಾಯ್ಕ್ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು.
ನಂತರ ಮಾತನಾಡಿ ಈಗಾಗಲೇ ಮುಂಗಾರು ಆರಂಭವಾಗಿದ್ದು ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ರೈತರು ಬಿತ್ತನೆ ಗೆ ಅನುಕೂಲವಾಗುತ್ತದೆ. ಕೃಷಿ ಇಲಾಖೆಯಿಂದ ಮೆಕ್ಕೆಜೋಳ, ಸಜ್ಜೆ, ರಾಗಿ, ತೊಗರಿ ವಿತರಣೆ ಮಾಡಲಾಗುವುದು. ಸಣ್ಣ ಹಿಡುವಳಿದಾರರು ಪಹಣಿಯ ಮೇಲೆ ಒಂದು ಬ್ಯಾಗಿಗೆ 20 ರೂಪಾಯಿಯಂತೆ ಸಬ್ಸಿಡಿ ನೀಡಲಾಗುವುದು ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ಮಾತನಾಡಿ ಹೆಚ್ಚಿನ ಸಬ್ಸಿಡಿ ಸಿಗುವಂತೆ ಪ್ರಯತ್ನ ಮಾಡುತ್ತೇನೆ ಎಂದರು. ರೈತರಿಗೆ ಕಳಪೆ ಮಟ್ಟದ ಬೀಜ ವಿತರಿಸಿದರೆ ಅವರ ಮೇಲೆ ಕ್ರಿಮಿನಲ್ ದಾಖಲಾಗಿಸುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ನಾಯ್ಕ್, ಮುಖಂಡರಾದ ಬಾದಾಮಿ ಮೃತ್ಯುಂಜಯ, ಕಿನ್ನಾಳ ಸುಭಾಷ್ , ಎಂಪಿ ಕೊಟ್ರೇಶ್, ಜಿಎಂ ಜಗದೀಶ್, ಚಿತ್ತವಾಡಿಗಿ ಪ್ರಕಾಶ್, ಕೆ ರೋಹಿತ್, ಲಿಂಗರಾಜ್, ಸರ್ದಾರ್ ಯಮನೂರ್, ನಾಗರಾಜನ್ನು ಸಂಪತ್ ಕುಮಾರ್ ನಾಯ್ಕ್ ರಾಹುಲ್ , ಇತರರಿದ್ದರು