ಹಬೋಹಳ್ಳಿ : ಶಾಲಾ ಬಸ್ ಡಿಕ್ಕಿ  ಬೈಕ್ ಸವಾರ ಸ್ಥಳದಲ್ಲಿಯೇ ಸಾವು


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.12 ತಾಲೂಕಿನ ಬಾಚಿಗೊಂಡನಹಳ್ಳಿ -2 ಮತ್ತು ಹಗರಿಕ್ಯಾದಿಗಿಹಳ್ಳಿ ಮಧ್ಯದ ರಸ್ತೆಯಲ್ಲಿ ಇಂದು ಶಾಲಾ ಬಸ್  ಬೈಕ್ ಸವಾರನಿಗೆ ಡಿಕ್ಕಿಯಾದ ಪರಿಣಾಮ ಸವಾರನು ಸ್ಥಳದಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ .
ಮೃತ ವ್ಯಕ್ತಿ ಕಲ್ಗುಡಿ ನಾಗರಾಜ್ (38) ಏಣಿಗಿ ಬಸಾಪುರ ಗ್ರಾಮದವನು. ಈತನು ತಮ್ಮ ಊರಿಂದ ಕಾರ್ಯನಿಮಿತ್ತ  ಬಾಚಿಗೊಂಡನಹಳ್ಳಿ ಹೋಗುವಾಗ ಎದುರಿಗೆ ಬಂದ ಬಸ್ಸು ಡಿಕ್ಕಿ ಹೊಡೆದಿದೆ. ಎದೆ ಮತ್ತು ತಲೆ ಭಾಗ ಪೆಟ್ಟಾಗಿ ಸ್ಥಳದಲ್ಲಿ ಅಸುನೀಗಿದ್ದಾನೆ
ಅಪಘಾತವಾಗುತ್ತಿದ್ದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.