ಹಬೋಹಳ್ಳಿ : ವಿಶ್ವ ರಕ್ತ ದಾನಿಗಳ ದಿನಾಚರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.18 ಪಟ್ಟಣದ ಗಂಭೀ ಸಪಪೂ ಕಾಲೇಜಿನಲ್ಲಿ ಜಿಜೆ ಸ್ಟಾರ್ ಸನ್ ಸಂಸ್ಥೆ ( ರಿ ) ಆಯೋಜನೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗಿತು , ರಕ್ತದಾನದ ಅರಿವಿನ ಮಹತ್ವ ಎಂಬ  ವಿಚಾರ ಮಂಡನೆ ಮಾಡಲು ಬಂದಿದ್ದ ಕೆ ಎಂ ಸಂತೋಷ ಕುಮಾರ್ ಭಗತ್ ಸಿಂಗ್ ಮಾತನಾಡಿ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ರಕ್ತದಾನ ಮಾಡುವುದರಿಂದ ಆಗುವ ಅವಶ್ಯಕತೆ ಅನುಕೂಲತೆಗಳನ್ನು  ತಿಳಿಸಿದರು ಮತ್ತು ಮೊಬೈಲ್ ನಲ್ಲಿ ಹೆಸರು ಸೇವ್ ಮಾಡಿಕೊಳ್ಳುವಾಗ ಅವರ ಬ್ಲಡ್ ಗ್ರೂಪ್ ನ್ನು ಮೊದಲು ಸೇವ್ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು ಹಾಗೂ ಹೆಚ್ಚು ಹೆಚ್ಚಾಗಿ ಅನ್ಯರಿಂದ ರಕ್ತದಾನವಾಗುವಂತೆ ನಿರೀಕ್ಷಿಸದೆ ತಾವೇ ತಮ್ಮ ಕುಟುಂಬದಗಳಿಗೆ ರಕ್ತದಾನ ಮಾಡಬೇಕೆಂದರು , ಸಮಾಜದಲ್ಲಿ ಬದುಕುತ್ತಿರುವಾಗ ಕೆಲವು ಘಟನೆಗಳು ಅನಿವಾರ್ಯವಾಗಿ ಸಂಭವಿಸುತ್ತದೆ ಆಕ್ಸಿಡೆಂಟ್ , ಅನಾರೋಗ್ಯ ಅಥವಾ ಮಹಿಳೆಯರಿಗೆ ಗರ್ಭಿಣಿಯಾದ ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ ಆಗ ರಕ್ತದಾನಕ್ಕೆ ಕರೆಬಂದಾಗ ತಕ್ಷಣವೆ ಸ್ಪಂದಿಸಿ ರಕ್ತದಾನ ಮಾಡಬೇಕು ಎಂದರು.
ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ವಿವೇಕಾನಂದ ಬ್ಲಡ್ ಬ್ಯಾಂಕ್ ನ ಮುಖ್ಯಸ್ಥರಾದ ಡಾ.ವಿಶ್ವನಾಥ್ ಗವಿಯಪ್ಪ  ಮಾತನಾಡಿ ಸಮಾಜದ ಅಭಿವೃದ್ಧಿ ಗೆ ಪೂರಕವಾಗುವಂತೆ ಸಾಮಾಜಿಕೆ ಸೇವೆ ಮಾಡಬೇಕು ರಕ್ತಾದಾನ ಮಾಡುವುದರಿಂದ  ದಾನಿಗಳಿಗೆ  ಹೆಚ್ಚು ಅನುಕೂಲ  ಮತ್ತು ಯಾವ ವಯಸ್ಸಿನವರು ರಕ್ತದಾನ ಮಾಡಬಹುದು ಅವರ ಆರೋಗ್ಯ ಸ್ಥಿತಿ ಬಗ್ಗೆ ಅರಿವು ಮೂಡಿಸಿದರು
ಕಾಲೇಜ್ ಎನ್ ಎಸ್ ಎಸ್  ಘಟಕದ ಅಧ್ಯಕ್ಷ ನಾಗರಾಜ್   ರಾಜ್ಯ ಆಟೋ ಯುನಿಯನ್‌ ಕಾರ್ಯದರ್ಶಿಯಾದ   ಕೈಲಾಸ್  , ಮಾತನಾಡಿದರು
ಪ್ರಾಸ್ತಾವಿಕವಾಗಿ ಜಯಸೂರ್ಯ ಮಾತನಾಡಿದರು ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಎಂಕೆ ದುರುಗಪ್ಪ ವಹಿಸಿದ್ದರು.
 ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ‌ ಪರಿಷತ್ತಿನ  ತಾಲೂಕು ಅಧ್ಯಕ್ಷ ಹುಲಿಮನಿ ಗೂಳೆಪ್ಪ  ಲ್ಯಾಬ್ ಟೆಕ್ನಿಷನ್ ಶಿಲ್ಪಾ , ಕುಮಾರ್ , ಕಾಲೇಜ್ ರೆಡ್ ಕ್ರಾಸ್ ಘಟಕದ ಮಹೇಶ್ ರವರು , ಜಿಜೆ ಸ್ಟಾರ್ ಸನ್ ಸಂಸ್ಥೆಯ ಅಧ್ಯಕ್ಷ ದುರುಗಪ್ಪ, ಉಪಸ್ಥಿತರಿದ್ದರು.
ಈ ವೇಳೆ ತಾಲೂಕು ಆರೋಗ್ಯ ಇಲಾಖೆಯಿಂದ  ಆಹಮಿಸಿದ್ದ ಡಾ ಪ್ರವೀಣ್ ಸರ್ ಮತ್ತು ಲ್ಯಾಬ್ ಟೆಕ್ನಿಷನ್ಸ್ಗಳು ನೂರಾರು ವಿದ್ಯಾರ್ಥಿಗಳಿಗೆ ಅವರ ರಕ್ತದ ಗುಂಪನ್ನು ಪರೀಕ್ಷೆ ಮಾಡಿ ತಿಳಿಸಿದರು .