ಹಬೋಹಳ್ಳಿ :ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ಜೆ.ಜೆ.ತಂಡಕ್ಕೆ ಗೆಲುವು    


ಸಂಜೆವಾಣಿ ವಾರ್ತೆ       
ಹಗರಿಬೊಮ್ಮನಹಳ್ಳಿ. ಜು.25 ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದಕ್ಕೆ ನಡೆದ  ಚುನಾವಣೆಯಲ್ಲಿ ಜೆ.ಜೆ ತಂಡ ಗೆಲುವು ಸಾಧಿಸಿದ್ದಾರೆ..
 ಭಾನುವಾರ ವಿದ್ಯುತ್ ಗುತ್ತಿಗೆದಾರರ ಬಳ್ಳಾರಿ ಜಿಲ್ಲಾ ಸಮಿತಿಗೆ ನೆಡೆದ ಚುನಾವಣೆಯಲ್ಲಿ ಆರ್.ಆರ್. ತಂಡ ಹಾಗೂ ಜೆ.ಜೆ.ತಂಡ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು ಅಂತಿಮವಾಗಿ ಜೆ.ಜೆ.ತಂಡ ಜಯಗಳಿಸಿದ್ದರಿಂದ ಜೆಸ್ಕಾಂ ಆವರಣದಲ್ಲಿರುವ ಶ್ರೀ ಗಣೇಶ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಕೇಕ್ ಕತ್ತರಿಸಿ ಗೆಲುವಿನ ಸಿಹಿ ಹಂಚಿ ಸಂಭ್ರಮಿಸಿದರು.                                    
ವಿದ್ಯುತ್ ಗುತ್ತಿಗೆದಾರರ ಸಂಘದ ಹಿರಿಯರಾದ ಕೆಇಬಿ ವಿಜಯಕುಮಾರ್ ಪತ್ರಿಕೆಯೊಂದಿಗೆ  ಮಾತನಾಡಿ ನಿನ್ನೆ ವಿದ್ಯುತ್ ಗುತ್ತಿಗೆದಾರರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಗೆ ನೆಡೆದ ಚುನಾವಣೆಯಲ್ಲಿ ಜೆ.ಜೆ.ನಮ್ಮ ತಂಡದ ಸದಸ್ಯರು ಅಭೂಪೂರ್ವ ಜಯಗಳಿಸಿದ್ದು ಜೊತೆಗೆ ಮೊದಲ ಬಾರಿಗೆ ನಮ್ಮ ತಾಲ್ಲೂಕಿನ ಶಿವಕುಮಾರ್ ಹಾಗೂ ಪಿ.ಕೃಷ್ಣ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಸಂತಸನ್ನುಂಟ್ಟು ಮಾಡಿದೆ.  ಜೆ.ಜೆ.ತಂಡದ ಕೆ.ಜಗನ್ ಅದ್ಯಕ್ಷರಾಗಿ,ಕೆ.ನಾಗರಾಜ, ಉಪಾಧ್ಯಕ್ಷರಾಗಿ ಹೆಚ್ .ಸೂರಪ್ಪ ಕಾರ್ಯದರ್ಶಿಯಾಗಿ ,ಟಿ.ಬಸವರಾಜ ,ಕೆ.ಎಂ.ವೀರೇಶ್ ಕುಮಾರ ಸ್ವಾಮಿಸಂಘಟನಾ ಕಾರ್ಯದರ್ಶಿಯಾಗಿ, ಟಿ.ಸುಧಾಕರ ಕೋಶಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.                                            ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ತಳವಾರ ರಾಘವೇಂದ್ರ,ಸಂಘದ ನಾಗರಾಜ, ತಿಮ್ಮಣ್ಣ,ಶಂಕ್ರಪ್ಪ,ಜಹಾಂಗೀರ್ ಸಾಹೇಬ್ ,ಲಕ್ಷ್ಮಿ ನಾರಾಯಣ,ಗುರು, ಲೋಕೇಶ್, ಸಿ.ಕೊಟ್ರೇಶ್,ಸಿದ್ದು ಮುರುಳಿ,ಎಂ ಕುಮಾರ್ ಸ್ವಾಮಿ ಶ್ರೀಧರ,ಸೇರಿದಂತೆ ಇತರರು ಇದ್ದರು.