ಹಬೋಹಳ್ಳಿ : ರೈಲ್ವೆ ಹೋರಾಟ ಸಮಿತಿಯಿಂದ ಮನವಿ

ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ. ಫೆ.10 ತಾಲೂಕಿನ ರೈಲ್ವೆ ಹೋರಾಟ ಸಮಿತಿಯಿಂದ ಶುಕ್ರವಾರ ಹೊಸಪೇಟೆಯಲ್ಲಿ ಡಾ. ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹುಬ್ಬಳ್ಳಿಯ ವಿಭಾಗದ ರೈಲ್ವೆ ಜನರಲ್ ಮ್ಯಾನೇಜರ್ ಅವರನ್ನು ಸನ್ಮಾನಿಸಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ಹರಿಹರ ಮತ್ತು ಹೊಸಪೇಟೆಯ ಮಾರ್ಗದಲ್ಲಿ ಬರುವ ಪಟ್ಟಣದ ರೈಲ್ವೆ ಗೇಟ್ ನ್ನು  ಶೀಘ್ರ ವಾಗಿ  ಮೇಲು ಸೇತುವೆ ಮತ್ತು ಅಂಡರ್ ಪಾಸ್ ನಿರ್ಮಿಸಬೇಕು. ದಿನಾಲು ಟ್ರಾಫಿಕ್ ಸಮಸ್ಯೆಯಿಂದ ಹೋಗಿ ಬರುವವರಿಗೆ ತೊಂದರೆಯಾಗಿದೆ. ಇದಲ್ಲದೆ . ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಎಂದು ಮನವಿಯನ್ನ ಸಲ್ಲಿಸಿದರು . ಮನವಿಗೆ ಸ್ವೀಕರಿಸಿ ರೈಲ್ವೆ ಅಧಿಕಾರಿಗಳು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಿ. ಶಿವಕುಮಾರ್, ಸತೀಶ್ ಪಾಟೀಲ್, ಹೆಚ್ ಬಿ ಮಂಜುನಾಥ್,  ಮಂಜುನಾಥ್ ಹೆಚ್ಎಂ, ಉಮಾಶಂಕರ್ ಗೌಡ್ರು ಹಾಗೂ ಹೊಸಪೇಟೆಯ ರೈಲ್ವೆ ಹೋರಾಟ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು
One attachment • Scanned by Gmail