ಹಬೋಹಳ್ಳಿ : ರೈತರ ಬೆಳೆ ನಷ್ಟ, ಪರಿಹಾರಕ್ಕೆ ಆಗ್ರಹ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.19 ಮಳೆ ಕೈಕೊಟ್ಟಿರುವುದರಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ. ಬರಪೀಡಿತ ಪ್ರದೇಶ ಎಂದು ಘೋಷಿಸಿ ತಾಲೂಕಿನ ರೈತರು ಉಪ ತಹಸೀಲ್ದಾರ್  ಅನ್ನದಾನೇಶ್ವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ ಕಚೇರಿ ಮುಂದೆ ರೈತ ಮುಖಂಡ ಮೈನಹಳ್ಳಿ ಕೊಟ್ಟೆಶಪ್ಪ ಮಾತನಾಡಿ ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರ ಬೆಳೆದ ಬೆಳೆಗಳು ಸಂಪೂರ್ಣ ನೆಲಕಚ್ಚಿ ಹೋಗಿವೆ. ರೈತರು ಸಾಲ ಮಾಡಿ ಬೀಜ  ಗೊಬ್ಬರ ಖರ್ಚು ಮಾಡಿದ್ದಾರೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆ ಮೂಡಿದೆ  ಈಗ ಸಂಪೂರ್ಣ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಸರ್ವೆ ನಡೆಸಿ ಬರಪೀಡಿತ  ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು
 ಈ ಸಂದರ್ಭದಲ್ಲಿ ರೈತ ಮುಖಂಡರಾದ ಉಲವತ್ತಿ ಎಂ ಸೋಮಪ್ಪ, ಬನ್ನಿಗೋಳು ವೆಂಕಣ್ಣ, ಕಿನ್ನಾಳ ಸುಭಾಷ್, ಎಸ್ ಎಸ್  ಎತ್ತಿನಮನಿ, ಗಿರಿರಾಜ ರೆಡ್ಡಿ ಶಿವಪುತ್ರಪ್ಪ, ಪೂಜಾರ್ ಮಲ್ಲೇಶ್, ಪೂಜಾ ಶಿವಪ್ಪ  ರಮೇಶ ಕೊಟ್ರೇಶ ಗಜೇಂದ್ರ ಇತರರಿದ್ದರು