ಹಬೋಹಳ್ಳಿ : ರಾಧಾಕೃಷ್ಣನ್ ರಾಷ್ಟೀಯ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮಾ.14 ಸುಜ್ಞಾನ  ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀಮಾತಾ ಪ್ರಕಾಶನ(ರಿ) ಕರ್ನಾಟಕ ಹಾಗೂ ದಿ ಜರ್ನಿ ಆಫ್ ಸೊಸೈಟಿ (ರಿ)ದೆಹಲಿ
ಕೊಡ ಮಾಡುವ 2023 ನೇ ಸಾಲಿನ ಡಾ. ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿಯು  ತಾಲೂಕಿನ ಹೊಸಕೇರಿ ಗ್ರಾಮದ ಶಾಲೆಯ ಶಿಕ್ಷಕ ಟಿ ಸೋಮಶೇಖರ  ಹಾಗೂ ಬ್ಯಾಲಾಳು ಗ್ರಾಮದ ಶಾಲೆಯ ಶಿಕ್ಷಕ  ಹೆಚ್. ಕೊಟ್ರಪ್ಪ , ಹನಸಿ ಗ್ರಾಮದ ಶಾಲೆಯ ಶಿಕ್ಷಕ  ಕೆ. ರೇವಣಸಿದ್ದಪ್ಪ , ಮೊರಗೇರಿ ಗ್ರಾಮದ ಹರಿಜನ ಕಾಲೋನಿಯ ಶಾಲೆಯ ಶಿಕ್ಷಕ ಮಂಜನಗೌಡ ಸಂಕನಗೌಡರ್ ಇವರಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಪ್ರಶಸ್ತಿಯು ಶಿಕ್ಷಣ ಇಲಾಖೆಯಲ್ಲಿ ಗಣನೀಯ ಸಾಧನೆಗೈದ  ಹಿನ್ನೆಲೆಯಲ್ಲಿ  ರಾಷ್ಟ್ರೀಯ ಶಿಕ್ಷಕ ರತ್ನ ಹಾಗೂ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆಯಲ್ಲಿರುವ  ಚಾಮರಾಜಪೇಟೆ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮತ್ತು ರಾಜ್ಯಮಟ್ಟದ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ  ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀಮಾತಾ ಪ್ರಕಾಶನ(ರಿ) ಕರ್ನಾಟಕ ಹಾಗೂ ದಿ. ಜರ್ನಿ ಆಫ್ ಸೊಸೈಟಿ ದೆಹಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ ನಾಗರಾಜ ತಂಬ್ರಹಳ್ಳಿ, ತಾಲೂಕಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಎ. ಸೋಮನಗೌಡ, ಗಂ ಭೀ ಪ.ಪ ಪೂ ಕಾಲೇಜಿನ ಪ್ರೌಢಶಾಲಾ ಶಿಕ್ಷಕ ಎಂ. ರಾಜು,  ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಗಾಂಧಿನಗರ ತಾಲೂಕು  ಘಟಕದ ಅಧ್ಯಕ್ಷ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಶಿಕ್ಷಕರು, ಟಿ.ತ್ಯಾಗರಾಜು ಅಭಿಯಂತರರು, ಕೆ.ಪಿ.ಟಿ.ಸಿ ಎಲ್ ವಿದ್ಯುತ್ ಸ್ವೀಕರಣಾ ಕೇಂದ್ರ ಮೈಸೂರು, , ಹರೀಶ ಸಿ.ಹಂಸ, ಡಾ.ಷಕೀಬ್ ಎಸ್ ಉಪನ್ಯಾಸಕರು ,ಹೆಚ್. ಕೆ ಮಹಾದೇವ  ಹುಣಸೂರು, ಶ್ರೀಮತಿ ಹೆಚ್.ಎಸ್ ಪ್ರತಿಮಾ ಹಾಸನ್,   ಡಾ.ಮಲ್ಲಯ್ಯ ಅತ್ತನೂರು ಕನ್ನಡ ಸಹಾಯಕ ಪ್ರಾಧ್ಯಾಪಕರು ರಾಯಚೂರು ಉಪಸ್ಥಿತರಿದ್ದರು.