ಹಬೋಹಳ್ಳಿ: ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ ತುಂಬಿ ಹರಿದಿವೆ


ಸಂಜೆವಾಣಿ ವಾರ್ತೆ.
ಹಗರಿಬೊಮ್ಮನಹಳ್ಳಿ. ಜು.28 ತಾಲೂಕಿನಲ್ಲಿ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಹಲವಾರು ಹಳ್ಳಕೊಳ್ಳಗಳು ತುಂಬಿ ಹರಿದಿರುವುದು ನೋಡಿ ರೈತರು ಸಂತಸಗೊಂಡರು.
ಮಧ್ಯ ರಾತ್ರಿ ಪ್ರಾರಂಭವಾದ ಮಳೆ ಸುಮಾರು ಮೂರು ತಾಸು ಭರ್ಜರಿಯಾಗಿ ಸುರಿದ ಮಳೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತ ತಾಲೂಕ್ ಗ್ರಾಮಗಳಲ್ಲಿ ನೀರು ತುಂಬಿ ಹಳ್ಳಕೊಳ್ಳಗಳು ಅರಿದಿರುವುದು ಸಂತಸ ತಂದಿದೆ. ಮಿಂಚು ಗುಡುಗು ಮೂಲಕ ಮಳೆಯ ಆರ್ಭಟ ಜೋರಾಗಿ ಬಂದಿರುವುದು ನೋಡಿದ ರೈತರು ಈ ವರ್ಷದ ಅತಿ ದೊಡ್ಡ ಮಳೆಯಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಬುಧವಾರ ಬಿಸಿಲಿನ ಬೇಗೆಯಿಂದ ಬೆಂದು ಹೋಗುತ್ತಿದ್ದ ಬೆಳೆಗಳಿಗೆ ರಾತ್ರಿ ಸುರಿದ ಮಳೆಯಿಂದ ಬೆಳೆಗಳು ಹಚ್ಚ ಹಸಿರಾಗಿ ಲವಲವಿಕೆಯಿಂದ ಗರಿ ಗೆದಿರಿ ನಿಂತಿವೆ. ರೈತರ ಬೆಳೆಗಳಿಗೆ ಈ ಸಂದರ್ಭದಲ್ಲಿ ಒಂದು ಮಳೆಯ ಅವಶ್ಯಕತೆ ಇತ್ತು. ಈ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ನೋಡಿದೆ.
ತಾಲೂಕಿನ ಮಾಲ್ವಿ ಜಲಾಶಯಕ್ಕೆ ನೀರು ಕೂಡ ಹರಿದು ಬರುತ್ತಿದೆ. ಬ್ಯಾಲಾಳ ಕೆರಿಗೆ ಕೂಡ ನೀರು ಹರಿದು ಬಂದಿದೆ ಹರಿದು ಬರುತ್ತಿರುವ ನೀರನ್ನು ನೋಡಲು ಜನರು ಧಾವಿಸಿದ್ದು ಕಂಡು ಬಂತು.. ತಾಲ್ಲೂಕಿನಲ್ಲಿ ಬಿದ್ದ
ಮಳೆ ವರದಿ

ಈ ಕೆಳಕಂಡ ಮಳೆ ಮಾಪನ ಕೇಂದ್ರಗಳ ಪ್ರಕಾರ

  • ಹ.ಬೊ.ಹಳ್ಳಿ – 110.8 ಮೀ. ಮೀ
  • ತಂಬ್ರಹಳ್ಳಿ- 53.1 ಮೀ. ಮೀ
  • ಹಂಪಸಾಗರ – 80.6 ಮೀ. ಮೀ
  • ಮಾಲವಿ – 80.4 ಮೀ. ಮೀ

( ಇಂದು ಸರಾಸರಿ ಬಿದ್ದ ಮಳೆ ಪ್ರಮಾಣ 81.22 )