
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಆ.23 ಪಟ್ಟಣದ ಮಡಿವಾಳ ಮಾಚಿದೇವ ದೇಗುಲದಲ್ಲಿ ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸ್ವಾಮಿಗಳು ಮನೆ ಮನೆಗೆ ಮಾಚಿದೇವ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶ್ರಾವಣ ಮಾಸದ ನಿಮಿತ್ತ ರಾಜ್ಯದ ತಾಲೂಕುಗಳ ಅಂಗಳದಲ್ಲಿ ಮನ ಮನೆಗೆ ಮಾಚಿದೇವ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುಲಾಗಿದ್ದು. ಅದರ ನಿಮಿತ್ತ ಸೋಮವಾರ ಹಗರಿಬೊಮ್ಮನಹಳ್ಳಿ ತಾಲೂಕಿಗೆ ಆಗಮಿಸಲಾಯಿತು. ಸಾನಿಧ್ಯ ವಹಿಸಿರುವ ಸ್ವಾಮೀಜಿ ಮಾತನಾಡಿ ಸಮಾಜದ ಸಂಘಟನೆ ಜೊತೆಗೆ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹೇಗೆ ಸಬಲರಾಗಬೇಕು, ನಿರಂತರ ಮಠದೊಂದಿಗೆ ಸಂಪರ್ಕ ಬೆಳೆಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಿಗುವಂತಾಗಲಿ ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷ ಎಂ ರಾಮಣ್ಣ, ಉಪಾಧ್ಯಕ್ಷರಾದ ಎಂ ಮಂಜಣ್ಣ, ಎಂ ಹುಲುಗಪ್ಪ, ಕಾರ್ಯದರ್ಶಿ ಕಟ್ಟಿಮನಿ ಶ್ರೀನಿವಾಸ್, ಖಜಾಂಚಿ ಎ. ಪ್ರಕಾಶ್ ಮುಖಂಡರಾದ ಎಂ ಕರಿಯಪ್ಪ, ಎಂ.ಬಾಳಪ್ಪ, ಹಂಪಾಪಟ್ಟಣ ರಾಮಣ್ಣ, ಸಕ್ರಿಹಳ್ಳಿ ಮಣ್ಣುಬಸಪ್ಪ, ಕೋಗಳಿ ಮೇಘರಾಜ್, ಎಂ. ತಿಮ್ಮಣ್ಣ ಇದ್ದರು.