ಹಬೋಹಳ್ಳಿ : ಮನೆ ಮನೆಗೆ ಮಂತ್ರಾಕ್ಷತೆ      


ಸಂಜೆವಾಣಿ ವಾರ್ತೆ  
ಹಗರಿಬೊಮ್ಮನಹಳ್ಳಿ :ಜ.10 ಪಟ್ಟಣದ ಕೆ.ವಿ. ಒ.ಆರ್ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ಅಕ್ಷತೆಗಳನ್ನು ನೀಡಲಾಯಿತು. ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಪುರಸಭೆ ಸದಸ್ಯ ಬಿ ಡಿ ಗಂಗಾಧರ ಇವರ ನೇತೃತ್ವದಲ್ಲಿ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಉದ್ಘೋಷದೊಂದಿಗೆ ಮನೆ ಮನೆಗೆ ಮಂತ್ರಾಕ್ಷತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  
ಪುರಸಭೆ ಸದಸ್ಯ ಬಿ ಡಿ ಗಂಗಾಧರ ಮಾತನಾಡಿ ದೇಶದ ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22 ರಂದು ಆಯೋದ್ಯೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಅಂಗವಾಗಿ ಜನರ ಮನೆ ಮನೆಗೆ ಗಳಿಗೆ ಹೋಗಿ ಮಂತ್ರಾಕ್ಷತೆ ಹಾಗೂ ಅಯೋದ್ಯೆಯ ರಾಮ ಮಂದಿರ ಭಾವಚಿತ್ರ ನೀಡಿಲಾಗುತಿದ್ದು ಜನವರಿ  22 ರಂದು ದೀಪಾ ಹಚ್ಚಿ ಪೂಜೆ ಸಲ್ಲಿಸಿ ಮಂತ್ರಾಕ್ಷತೆಯನ್ನು ತಲೆಯ ಮೇಲೆ ಹಾಕಿಕೊಂಡು ಶ್ರೀ ರಾಮನ ಮಂತ್ರ ಜಪಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿ ಸಿಹಿಯೂಟ ಮಾಡಿ ಸಂಭ್ರಮಿಸಿ ಎಂದರು.   
ಈ ವೇಳೆ ಅಕ್ಕಿ ಮಲ್ಲಿಕಾರ್ಜುನ,ಎಸ್.ಅಂಬಣ್ಣ ,ನಿವೃತ್ತ ಶಿಕ್ಷಕರಾದ ದಾನಯ್ಯ, ಕೊಟ್ರೇಶಪ್ಪ, ಶ್ಯಾಬಾದಿ ಬಸಜ್ಜ, ಗುರುವಣ್ಣ ,ರಂಜಿತ್ ಸಿಂಗ್, ಓಂ ಸಿಂಗ್,ಜೈಸಿಂಗ್,ಅಶೋಕ್ ಪಾಟೀಲ್,ಮಂಗಳ ರಾಮ್, ರಾಮಣ್ಣ,ಮಂಜುನಾಥ ಗೌಡ, ಗುರುಬಸವರಾಜ, ಶ್ರೀಧರ ಹಿರೇಮಠ, ಕರ್ನಳ್ಳಿ ಸಿದ್ದಪ್ಪ,ಮಣಿಕಂಠ,ತಿಪ್ಪೇಶ್ ,ಗುರು ಬಸವರಾಜ,ಸೇರಿದಂತೆ ಇತರರಿದ್ದರು.