ಹಬೋಹಳ್ಳಿ : ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಕೋರಿ ಗೋಣಿಬಸಪ್ಪ ಆಯ್ಕೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ನ.15 ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೋರಿ ಗೋಣಿಬಸಪ್ಪ ಈ ಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಶಾಸಕ ಎಸ್ ಭೀಮಾ ನಾಯ್ಕ್  ಹೇಳಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ ಸಾಯಂಕಾಲ ನೂತನ ಅಧ್ಯಕ್ಷರಿಗೆ ನೇಮಕ ಪತ್ರ ನೀಡುವ ಮೂಲಕ ಮಾತನಾಡಿ ಪಕ್ಷದ ನಿಷ್ಠೆ ಪ್ರಾಮಾಣಿಕ ಸಿದ್ಧಾಂತದಲ್ಲಿ  ಕೆಲಸ ಮಾಡುವ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದಿದೆ. ಈ ಆಯ್ಕೆಗೆ    ತಾಲೂಕು ಮತ್ತು ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಮತ್ತು ಮುಖಂಡರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ  ಮೂರು ವರ್ಷದಿಂದ ನಾಲ್ಕು ವರ್ಷ ಮೇಲ್ಪಟ್ಟು ಯಾರು ಅಧ್ಯಕ್ಷರಾಗಿರುತ್ತಾರೆ ಅವರನ್ನು ಬದಲಾಯಿಸುವ ಪ್ರಕ್ರಿಯೆ ಕೆಪಿಸಿಸಿ ವರಿಷ್ಠರು  ತೀರ್ಮಾನಿಸಿರುತ್ತಾರೆ. ಹಾಲಿ ಅಧ್ಯಕ್ಷ ಸೋಮಲಿಂಗಪ್ಪ ಅನಾರೋಗ್ಯದ ಕಾರಣ ಎರಡು ವರ್ಷದಿಂದ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ಇರುವುದು ಹಾಗೂ ಅವರ ಒಪ್ಪಿಗೆಯ ಮೂಲಕ ಅಧ್ಯಕ್ಷರ ಬದಲಾವಣೆ ಆಗಿದೆ.  ಚುನಾವಣೆ ಹತ್ತಿರ ಇರುವುದರಿಂದ ಪಕ್ಷ ಸಂಘಟನೆ ದೃಷ್ಟಿಯಿಂದ ಯುವಕರನ್ನು ನೇಮಿಸಿರುವುದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಲಾಭವಾಗಬಹುದು. ಇದೇ ರೀತಿ ಕೊಟ್ಟೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೂಡ ಆರು ತಿಂಗಳ ಕೆಳಗೆ ಬದಲಾವಣೆ ಮಾಡಲಾಗಿದ್ದು ಈಗ ದ್ವಾರಕೀಶ್ ಅಧ್ಯಕ್ಷರಾಗಿದ್ದಾರೆ ಮುಂದಿನ ದಿನಗಳಲ್ಲಿ ಈ ಇಬ್ಬರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
 ನೂತನ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೋರಿ ಗೋಣಿಬಸಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಒಂದು ಜವಾಬ್ದಾರಿಯ ಸ್ಥಾನವನ್ನು ನೀಡಿದೆ ಇದನ್ನು ನಾನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬದ್ಧನಾಗಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
 ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ಅಕ್ಕಿ ತೋಟೇಶ್, ಮುಖಂಡರಾದ ಕರಿಗೇರ್ ಚಂದ್ರಪ್ಪ, ಚಿಂತ್ರಪಳ್ಳಿ ದೇವೇಂದ್ರ, ಹುಚ್ಚಪ್ಪ, ಡಿಶ್ ಮಂಜುನಾಥ್, ಕಡಲಬಾಳ್ ವೆಂಕಟೇಶ್, ಹುಡೇದ್ ಗುರು ಬಸವರಾಜ್, ಗುರು ಬಸವರಾಜ್ ಸೊನ್ನದ್, ಉಮಾಶಂಕರ್ ಹುಲಗಪ್ಪ    ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಮರಿ ರಾಮಪ್ಪ, ಕಾಂಗ್ರೆಸ್ ಸಾಮಾಜಿಕ ತಾಣದ ಒಪ್ಪತೇಶ್ ಶೆಟ್ಟರ್, ಇತರರಿದ್ದರು.