ಹಬೋಹಳ್ಳಿ : ಬೇಡ ಜಂಗಮ ಎಸ್ಸಿ ಪ್ರಮಾಣ ಪತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.25 ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬೇಡ ಜಂಗಮ ಎಸ್ ಸಿ ಪ್ರಮಾಣ ಪತ್ರದಿಂದ ಈ ಬಾರಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ಸ್ಪರ್ಧಿಸುತ್ತಿದ್ದೇನೆ ಎಂದು ಡಾ. ಸುರೇಶ್ ಕುಮಾರ್ ತಿಳಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿ, ಉದ್ದೇಶಿಸಿ ಮಾತನಾಡಿ ಬೇರೆ ಪಕ್ಷದ ಮತಗಳನ್ನು ಸೆಳೆಯಲು ದುಡ್ಡು ಕೊಟ್ಟು ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲಿಸಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತವೆ. ಇದು ಎಲ್ಲ ಶುದ್ಧ ಸುಳ್ಳು ನಾನು ಯಾರ ಪರ ಮತ್ತು ಯಾರ ವಿರುದ್ಧ ಸ್ಪರ್ಧಿಸುತ್ತಿಲ್ಲ. ನನ್ನ ಉದ್ದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದು ಶಕ್ತಿಮೀರಿ ಗೆಲ್ಲುವ ಪ್ರಯತ್ನ ಮಾಡುತ್ತೇನೆ. ನನಗೆ ಒಂದು ಅವಕಾಶ ಸಿಕ್ಕಿದೆ ಅದನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ. ಈಗಾಗಲೇ ಹಳ್ಳಿಹಳ್ಳಿಗೆ ಹೋಗಿ  ಪ್ರಚಾರ ಮಾಡಿದ್ದೇನೆ ಮತದಾರರು ಕೂಡ ಸ್ಪಂದಿಸುತ್ತಾರೆ ಹಲವಾರು ಸಮಸ್ಯೆಗಳನ್ನು ಹೇಳಿದ್ದಾರೆ ನನ್ನನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ವಲಯಕ್ಕೆ ಬಲ ತುಂಬುವಂತಹ ಕೆಲಸ ಮಾಡುತ್ತೇನೆ. ಮೊದಲಿನಿಂದಲೂ ನನಗೆ ಶೈಕ್ಷಣಿಕ ಬಗ್ಗೆ ಆಸಕ್ತಿ ಇದೆ ತಾಲೂಕಿನಲ್ಲಿ ಒಳ್ಳೆ ಒಳ್ಳೆಯ ಕಾಲೇಜು  ನಿರ್ಮಿಸಲು ರಾಜಕೀಯ ಬಲ ಬೇಕಾಗಿದೆ ಆ ದೃಷ್ಟಿ ಕೋನ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ . ಮತದಾರರು ಮನಸ್ಸು ಮಾಡಿ ನನಗೆ ಮತ ನೀಡಿದರೆ ಅವರ ಸೇವೆ ಮಾಡಿಕೊಂಡು ಋಣ ತೀರಿಸುತ್ತೇನೆ ಎಂದರು.