ಹಬೋಹಳ್ಳಿ : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸ್ವಾಗತಕ್ಕೆ ರಸ್ತೆ ಉದ್ದಕ್ಕೂ ಫ್ಲಕ್ಸ್


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.14: ಪಟ್ಟಣಕ್ಕೆ ನಾಳೆ ಆಗಮಿಸುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸ್ವಾಗತ ಕೋರಲು ಬಿಜೆಪಿ ಆಕಾಂಕ್ಷಿಗಳು ಮುಖಂಡರು ಕಾರ್ಯಕರ್ತರು  ರಸ್ತೆ ಉದ್ದಕ್ಕೂ ತಮ್ಮ ನಾಯಕರ ಭಾವಚಿತ್ರಗಳೊಂದಿಗೆ ಅದ್ದೂರಿ ಸ್ವಾಗತಕ್ಕೆ ಫ್ಲಕ್ಸ್  ಗಳನ್ನು ಅಳವಡಿಸಿದ್ದಾರೆ.
 ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರಕ್ಕೆ ಬಿಜೆಪಿ ಸಂಕಲ್ಪ ಯಾತ್ರೆ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಆಕಾಂಕ್ಷಿಗಳು ಟಿಕೆಟ್ ಗೆ ದುಂಬಾಲು ಬಿದ್ದಿದ್ದಾರೆ. ಅಂತಿಮವಾಗಿ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುವುದೇ ಕುತೂಹಲವಾಗಿದೆ. ಕ್ಷೇತ್ರದಲ್ಲಿ ನಮ್ಮದೇ ಗುಂಪುಗಳನ್ನು ಮಾಡಿಕೊಂಡು ಈಗಾಗಲೇ ಆಕಾಂಕ್ಷೆಗಳು ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ. ಮತದಾರರು ಯಾರು ಅಭ್ಯರ್ಥಿ ಎಂದು ಗೊಂದಲ ದಲ್ಲಿ ಇದ್ದಾರೆ. ಏನೇ ಆಗಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಿಂದ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ಚೇತರಿಸಿಕೊಳ್ಳಬಹುದು.   

One attachment • Scanned by Gmail