
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.23 ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸರಳವಾಗಿಇಂದು ಬಸವ ಜಯಂತಿ ಆಚರಿಸಲಾಯಿತು.
ಬಿಜೆಪಿ ಅಭ್ಯರ್ಥಿ ಬಲ್ಲಾ ಹುಣಿಸಿ ರಾಮಣ್ಣ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಸಮಾನತೆಯ ಹರಿಕಾರ ಬಸವಣ್ಣ ನಮಗೆಲ್ಲ ಇಂದು ಮಾದರಿಯಾಗಿದ್ದಾರೆ. 12ನೇ ಶತಮಾನದಲ್ಲಿ ಅನಿಷ್ಟ ಪದ್ದತಿಯ ವಿರುದ್ಧ ಹೋರಾಟ ಮಾಡಿ ಸಮಾಜಕ್ಕೆ ಒಂದು ಸಮಾನತೆಯನ್ನು ಸಾರಿದ್ದು ಬಸವಣ್ಣ, ಅವರ ಒಂದು ಕ್ರಾಂತಿ ಇಂದಿನ ಪ್ರಜಾಪ್ರಭುತ್ವಕ್ಕೆ ನಾಂದಿ ಅವರು ಅಂದು ಇಂದು ಎಂದೆಂದಿಗೂ ಶಾಶ್ವತವಾಗಿ ನಮ್ಮೊಂದಿಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನವೀನ್ ಕುಮಾರ್ ಜೋಗಿ ಹನುಮಂತ ಕನಕಪ್ಪ ಟಿ ರಾಘು, ಲಕ್ಷ್ಮೀನಾರಾಯಣ, ವೆಂಕಟೇಶ್, ಕರಡಿ ರಾಮಪ್ಪ ಇತರರಿದ್ದರು.