ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.16 ತಂದೆ ತಾಯಿಗಳು ಅನೇಕ ಕನಸುಗಳನ್ನು ಹೊತ್ತು ಶಿಕ್ಷಣ ಕೊಡಿಸುತ್ತಾರೆ ಆದರೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಠಿಣ ಶ್ರಮದಿಂದ ಮಾತ್ರ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಹೆಚ್ ಹುಲ್ಲಾಳ ಹೇಳಿದರು
ಪಟ್ಟಣದ ಗುರುಭವನದಲ್ಲಿ ಶನಿವಾರ ಪ್ರಗತಿಪರ ಶಿಕ್ಷಕರ ವೇದಿಕೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಇವತ್ತು ಜಗತ್ತನ್ನೇ ಆಳುತ್ತಿರುವುದು ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿ ದಾನವನ್ನು ಸಂಪಾದಿಸುವ ಮೂಲಕ ತಮ್ಮ ತಂದೆ ತಾಯಿಗಳ ಕನಸನ್ನು ನನಸು ಮಾಡುವಂತಹ ಜವಾಬ್ದಾರಿ ಹೆಚ್ಚಿದೆ. ಸಮಾನತೆಯಿಂದ ಮಾತ್ರ ಸದೃಢ ಸಮರ್ಥ ಸಮಾಜ ನಿರ್ಮಾಣಗಳು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬಿಇಓ ಎಂಸಿ ಆನಂದ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ನಾಯಕ್, ವೇದಿಕೆಯ ಹುಸೇನ್ ಸಾಬ್ ,,ರಾಜು ಮಾತನಾಡಿದರು.
ತಾಲೂಕಿನ 20 ಸರಕಾರಿ ಪ್ರೌಢಶಾಲೆಗಳ 22 ವಿದ್ಯಾರ್ಥಿಗಳನ್ನು ಪುರಸ್ಕಾರ ನೀಡಿ ಗೌರವಿಸಲಾಯಿತು.
ಶೇಕಡ ನೂರರಷ್ಟು ಫಲಿತಾಂಶ ಗಳಿಸಿದ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಪ್ರಗತಿಪರ ಶಿಕ್ಷಕರ ವೇದಿಕೆಯ ಅಧ್ಯಕ್ಷ ಸೋಮನಗೌಡ ಪರಿಷತ್ ಅಧ್ಯಕ್ಷ ಗೌತಮ್ ಶಿಕ್ಷಕರಾದ ಮಲ್ಲಪ್ಪ ಹನುಮಕ್ಕ ಭಾಗ್ಯ ದೇವಿ ತೀರ್ಥಾಚಾರ್, ನವೀನ್ ಇದ್ದರು
ಕಾರ್ಯಕ್ರಮದ ನಿರೂಪಣೆಯನ್ನು ವೇದಿಕೆಯ ಟಿ.ಸೋಮಶೇಖರ್ ನಿರ್ವಹಿಸಿದರು .