ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.29 ಪಟ್ಟಣದ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದಿಂದ ಭಾನುವಾರ ಪಂಚಮಸಾಲಿ ಭವನದಲ್ಲಿ ತಾಲೂಕು ಘಟಕದಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ನೂತನ ಶಾಸಕ ಕೆ. ನೇಮಿರಾಜ್ ನಾಯ್ಕ್ ಉದ್ಘಾಟಿಸಿ ಮಾತನಾಡಿ ಮೊದಲಿನಿಂದಲೂ ಪಂಚಮಸಾಲಿ ಸಮಾಜ ನಮ್ಮ ಜೊತೆ ಒಳ್ಳೆ ಬಾಂಧವ್ಯದಿಂದ ಕೂಡಿದೆ. ಯಾವತ್ತು ಅವರು ನನ್ನನ್ನು ಕೈಬಿಟ್ಟಿಲ್ಲ. ಸಮಾಜದಿಂದ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸುವ l ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ ವೀರಶೈವ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಗುರಿ ಇಟ್ಟುಕೊಳ್ಳಬೇಕು. ಜೊತೆಗೆ ಶ್ರಮದಿಂದ ವಿದ್ಯಾಭಾಸ ಮಾಡಿದರೆ ನಿರ್ದಿಷ್ಟ ಗುರಿ ಹೊಂದಬಹುದು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಯೋಗ ರಾಮಯ್ಯ ಆಗಿದ್ದಾರೆ ಅವರು ಅಧಿಕಾರಕ್ಕೆ ಬರುತ್ತಾರೆ ಅಂತ ನಾನು ಮೊದಲೇ ಹೇಳಿದ್ದು ಅದೇ ರೀತಿ ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ ಅವರು ಹಲವಾರು ಗ್ಯಾರಂಟಿಗಳನ್ನು ನೀಡಿದ್ದಾರೆ ಅವುಗಳ ವಾರೆಂಟಿ ಗೊತ್ತಿಲ್ಲ . ಕೆಲವು ಯೋಜನೆಗಳು ಜನಪರವಾಗಿವೆ ಎಂದರು.
ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಜಿ ಪಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ಮುಖಂಡರಾದ ಬಸವರಾಜ್ ದಿಂಡೂರ್, ಬಾವಿ ಬೆಟ್ಟಪ್ಪ, ಸೋಮನಗೌಡ ಪಾಟೀಲ್, ಮಲ್ಲಣ್ಣ ಬೊಮ್ಮಸಾಗರ, ಹನಿಸಿ ಸಿದ್ದೇಶ್, ಕಿಚಡಿ ಕೊಟ್ರೇಶ್, ಮಹಿಳಾ ಘಟಕದ ಮಂಗಳ ಬಸವರಾಜ್ ಬಿಇಒ ಎಂಸಿ ಆನಂದ್ ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕವನ್ನು ತಾಲೂಕಾಧ್ಯಕ್ಷ ಅಕ್ಕಿ ಶಿವಕುಮಾರ್ ಮಾತನಾಡಿದರು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ 48 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಬದಾಮಿ ಮೃತ್ಯುಂಜಯ್, ವೈ ಮಲ್ಲಿಕಾರ್ಜುನ, ಮಂಜುನಾಥ್ ಗೌಡ, ಶಂಭುಲಿಂಗಪ್ಪ, ಶಿಕ್ಷಕ ಸಂಘದ ಅಧ್ಯಕ್ಷ ಹೆಚ್. ಲೋಕಪ್ಪ , ಹೊಳಗುಂದಿ ಶೇಖರಪ್ಪ ಇತರರಿದ್ದರು.
ಕಾರ್ಯಕ್ರಮವನ್ನು ಸೊನ್ನದ್ ಗುರು ಬಸವರಾಜ್, ಎಚ್ ಪಿ ಶಿವಶಂಕರ್ ನಿರ್ವಹಿಸಿದರು.