ಹಬೋಹಳ್ಳಿ : ನಾಳೆ ಶಾಸಕರಿಂದ ಸಾರ್ಥಕ ನಮನ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜ.2 ಪಟ್ಟಣದ ಗಂಗಾವತಿ ಭೀಮಪ್ಪನವರ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ನಾಳೆ ಸಾರ್ಥಕ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಶಾಸಕ ಎಸ್ ಭೀಮಾ  ನಾಯ್ಕ್ ಹೇಳಿದರು.
 ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರಿಗಾಗಿ 40 ವರ್ಷದ ಹೋರಾಟ ಫಲ ನೀಡಿದೆ. ಇದಕ್ಕೆ ಕಾರಣೀಭೂತರಾದ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 150 ಕೋಟಿ ರೂಪಾಯಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಂಡಿದ್ದು ಜಲಾಶಯಕ್ಕೆ ನೀರು ಕೂಡ ಹರಿದು  ಬಂದಿದೆ. ವರುಣನ ಕೃಪೆಯು ಸೇರಿ  ಹಲವು ವರ್ಷಗಳ ನಂತರ ಮಾಲವಿ ಜಲಾಶಯ ಭರ್ತಿಯಾಗಿದೆ.
 ಈ ಹಿನ್ನೆಲೆಯಲ್ಲಿ ಮಾಲ್ವಿ ಜಲಾಶಯದ  ವಿಜಯೋತ್ಸವ ಸಮಾವೇಶದ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಎಂ ಬಿ ಪಾಟೀಲ್ ಸಂತೋಷ್ ಲಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಪಕ್ಷದ ಹಿರಿಯರು ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಎಲ್ಲಾ ಮುಖಂಡರು  ಸೇರಿದಂತೆ ಎಪ್ಪತ್ತು ಸಾವಿರಕ್ಕೂ ಎಷ್ಟು ಜನ ಭಾಗವಹಿಸಲಿದ್ದಾರೆ.
 ನಾನು ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರಕ್ಕೆ ಸಿದ್ದರಾಮಯ್ಯ 2000 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅವರ ನೀಡಿದ ಅನುದಾನದಿಂದ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಿದೆ. ಅದರ ಅಂಗವಾಗಿ ಅವರಿಗೆ ಒಂದು ನಮನ ಸಲ್ಲಿಸಲೇ ಬೇಕಾಗಿದೆ. ಇದಕ್ಕಾಗಿ ಬಹಳ ದಿನದ ಕಾಯುತ್ತಿದ್ದೇವೆ. ಇದು ಚುನಾವಣೆಯ ಗಿಮಿಕ್ ಅಲ್ಲ ಒಂದು ವೇಳೆ ಅವರು ಅಂದುಕೊಂಡರು ನಾವೇನು ಸನ್ಯಾಸಿಗಳು ಅಲ್ಲ  ಚುನಾವಣೆಗಳು ಹತ್ತಿರ ಬಂದಾಗ ಜನರ ಮುಂದೆ ನಮ್ಮ ಅಭಿವೃದ್ಧಿಯನ್ನು ಹೇಳುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಸಿದ್ದರಾಮಯ್ಯ ಮಾಲ್ವಿ ಜಲಾಶಯಕ್ಕೆ ಬಾಗಿನ ಅರ್ಪಿಸಿ  ನಂತರ ಪ್ರಮುಖ ರಸ್ತೆಯ ಮೂಲಕ ವಾದ್ಯಗಳೊಂದಿಗೆ  ಮೆರವಣಿಗೆ ನಡೆಸಲಾಗುವುದು  ಎಂದರು.
 ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಮರಿ ರಾಮಪ್ಪ, ಮುಖಂಡರಾದ ಅಕ್ಕಿ ತೋಟೇಶ್, ಡಿಸ್ ಮಂಜುನಾಥ್, ಚಿಂತ್ರಪಳ್ಳಿ ದೇವೇಂದ್ರ, ಅಲ್ಲಾಭಕ್ಷಿ, ಅಜಿಜ್ಲ್ಲಾ  ಹಾಲ್ದಾಳ್ ವಿಜಯ್  ಕುಮಾರ್, ಹುಡೇದ್ ಗುರು ಬಸವರಾಜ್, ಸೆರೆಗಾರ್ ಹುಚ್ಚಪ್ಪ ಇದ್ದರು