ಹಬೋಹಳ್ಳಿ : ನನ್ನ ಮಣ್ಣು ನನ್ನ ದೇಶ ಅಭಿಯಾನ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಅ.17 ತಾಲೂಕಿನ ಸೊನ್ನ ಗ್ರಾಮದಲ್ಲಿ ತಾ ಪಂ ಮತ್ತು ಗ್ರಾ ಪಂ ಸಹಯೋಗದಲ್ಲಿ ಸೋಮವಾರ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಅಭಿಯಾನ ಜರಗಿತು.
 ಗ್ರಾಮದ ಶಾಲಾ ಆವರಣದಲ್ಲಿ
 ಸೇರಿದಂತೆ ಎಲ್ಲಾ ಓಣಿಗಳಲ್ಲಿ  ಗ್ರಾಮ ಕಾಯಕ ಮಿತ್ರರು ಕಳಶವನ್ನು ಹೊತ್ತು ಸಾಗಿದರು, ಎರಡು ಮಡಿಕೆಗಳಲ್ಲಿ ರಂಗೋಲಿಯ ಚಿತ್ತಾರ ಆಕರ್ಷಕವಾಗಿದ್ದವು ಡೊಳ್ಳು ಕುಣಿತದ ಮೆರವಣಿಗೆಯಲ್ಲಿ ನೂರಾರು ಗ್ರಾಮಸ್ಥರು, ಕೂಲಿಕಾರರು ಮಹಿಳೆಯರು ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆಗೆ ರಂಗು ತಂದರು. ದಾರಿಯುದ್ಧಕ್ಕೂ ನನ್ನ ದೇಶ ನನ್ನ ಮಣ್ಣು ಘೋಷಣೆ ಮೊಳಗಿತ್ತು.
ಚಾಲನೆ ನೀಡಿದ ತಾ ಪಂ ಇ ಒ ಪರಮೇಶ್ವರ ಜಿ., ಮಾತನಾಡಿ ದೇಶದ ಪ್ರತಿಯೊಂದು ಗುಣ ಮತ್ತು ಬದುಕು ಮಣ್ಣಿನಲ್ಲಿ ಅಡಗಿದೆ ಇಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಪುಣ್ಯವಂತರಾಗಿದ್ದಾರೆ ಪ್ರತಿ ಹಳ್ಳಿಯಿಂದ ಸಂಗ್ರಹಿಸಿದ ಮಣ್ಣನ್ನು ಕೇಂದ್ರದವರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು. ಗ್ರಾಮ ಪಂ ಅಧ್ಯಕ್ಷೆ  ತಳವಾರ ಸಾವಿತ್ರಮ್ಮ , ಹಾಗೂ  ರಮೇಶ ಮಹಾಲಿಂಗಪುರ ಸಹಾಯಕ ನಿರ್ದೇಶಕರು ಇದ್ದರು
ನಂತರ ಸರ್ಕಾರಿ ಪೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯರು “ ನನ್ನ ಮಣ್ಣು ನನ್ನ ದೇಶ” ಅಭಿಯಾನದ ಉದ್ದೇಶದ ಕುರಿತು ಮಾತನಾಡಿದರು, ಸಹಾಯಕ ನಿರ್ದೇಶಕರು ಪ್ರತಿಜ್ಷಾವಿಧಿ ಬೋದಿಸಿದರು, ನಂತರ ಬಾಲ್ಯ ವಿವಾಹ ತಡೆಗಟ್ಟುವ ಕುರಿತು  ಪ್ರತಿಜ್ಷಾವಿಧಿ ಬೋದಿಸಲಾಯಿತು.
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ  ಉಪಾಧ್ಯಕ್ಷರು, ಸರ್ವ ಸದಸ್ಯರು, ಕಾಯಕ ಬಂಧುಗಳು, ಕೂಲಿಕಾರರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.