ಹಬೋಹಳ್ಳಿ : ದ್ರೌಪದಿ ಮುರ್ಮ ಆಯ್ಕೆ  ಬಿಜೆಪಿ ವಿಜಯೋತ್ಸವ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.23 ದೇಶದ 15ನೆಯ ನೂತನ ರಾಷ್ಟ್ರಪತಿಯಾಗಿ ಎನ್ ಡಿ ಎ ಅಭ್ಯರ್ಥಿ ದ್ರೌಪದಿ ಮುರ್ಮ ಅವರು ಅತ್ಯಧಿಕ ಮತಗಳ ಅಂತರದಿಂದ ಚುನಾಯಿತರಾಗಿ ಆಯ್ಕೆಯಾಗಿದ್ದಕ್ಕೆ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ. ಹೆಚ್. ಮಲ್ಲಿಕಾರ್ಜುನ, ಎಸ್ ಟಿ ಮೋರ್ಚಾ ತಾಲೂಕ ಅಧ್ಯಕ್ಷ ಗಂಗಮ್ಮನಳ್ಳಿ ಪ್ರಕಾಶ, ಮುಖಂಡರಾದ ಟಿ ಮಹೇಂದ್ರ, ಬಣಕಾರ್ ಗೋಣೆಪ್ಪ, ಕಿನ್ನಾಳ ಸುಭಾಷ್, ಚಿತ್ತವಾಡಗಿ ಪ್ರಕಾಶ್, ಪುರಸಭೆ ಸದಸ್ಯರಾದ ಜೋಗಿ ಹನುಮಂತ, ನವೀನ್ ಕುಮಾರ್, ವೀರಣ್ಣ, ದೀಪಕ್ ಕಠಾರೆ ಇತರರಿದ್ದರು. 

Attachments area