ಹಬೋಹಳ್ಳಿ :ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ.16 ಹಳೆಯ ವೈಷಮ್ಯ ಮತ್ತು ಆಸ್ತಿಯ ವಿಚಾರಕ್ಕೆ   ದಾಯಾಧಿ ಕಲಹದಿಂದ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
 ಪಟ್ಟಣದ ರಾಮನಗರದ ಕೆಚ್ಚನ ಬಂಡಿ ರಸ್ತೆಯಲ್ಲಿ ಕೊಲೆಯಾಗಿದ್ದು. ಮೃತ ವ್ಯಕ್ತಿ ಬಂಗಾರಿ ಮಂಜುನಾಥ (30) ಬ್ಯಾಲಾಳು ನಿವಾಸಿಯಾಗಿದ್ದು. ಇಂದು ಬೆಳಗಿನ 2:40 ಸುಮಾರಿನಲ್ಲಿ  ಆರು ಜನ ಅಣ್ಣತಮ್ಮಂದಿರು ಸೇರಿ ರಸ್ತೆಯಲ್ಲಿಯೇ ಚಾಕು ಮತ್ತು ರಾಡಿನಿಂದ ಒಡೆದು ಕೊಲೆ ಮಾಡಿದಾರೆ.
 ಮೃತ ವ್ಯಕ್ತಿ ಮಂಜುನಾಥನ ಹೆಂಡತಿಗೆ ಕೊಲೆ ಆರೋಪಿಗಳು ಫೋನು ಮಾಡಿ ಅವ್ಯಾಚ್ಚ  ಮತ್ತು ಅಶ್ಲೀಲ ಪದಗಳಿಂದ ಬೈದಿದ್ದಾರೆ. ಎಂದು ಗಂಡ ಮಂಜುನಾಥ ಆರೋಪಿಗಳ ಮನೆ ಹತ್ತಿರ ಬಂದು ಕೇಳುತ್ತಿದ್ದಾಗ ಜಗಳ ಆರಂಭವಾಗಿ ಆರು ಜನ ಬಂಗಾರಿ ಮಂಜುನಾಥ್ ಮೇಲೆ ಹಲ್ಲೆ ಮಾಡಿ  ಚಾಕು ಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಕುಸಿದು ಬಿದ್ದ ಬಂಗಾರಿ ಮಂಜುನಾಥನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಂಭೀರ ಗಾಯಗೊಂಡಿದ್ದ ಮಂಜುನಾಥ ಮೃತಪಟ್ಟಿರುತ್ತಾನೆ.
 ಕೊಲೆ ಮಾಡಿದ ಆರೋಪಿಗಳಾದ ಉಪ್ಪಾರ್ ಬಸಪ್ಪ ಹನುಮಂತರಾಯ ಬಂಗಾರಿ ನಾಗರಾಜ ಬಂಗಾರಿ ಯಮುನೂರಿ, ಬಂಗಾರಿ ಉದಯ್ ಕುಮಾರ್  ಮತ್ತು ಅವಿನಾಶ್ ಈ ಎಲ್ಲಾ  ಆರೋಪಿಗಳನ್ನು  ಬಂದಿಸಲಾಗಿದೆ.
 ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿ ಬಾಬು ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ವಿಕಾಸ್ ಲಂಬಾಣಿ ಪಿಎಸ್ಐ  ಬಸವರಾಜ್ ಅಡವಿಬಾವಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.