ಹಬೋಹಳ್ಳಿ : ತಾಲೂಕಿನ 15 ಗ್ರಾಮಗಳು ಕಂದಾಯ ಗ್ರಾಮಗಳಾಗಿ  ಪರಿವರ್ತನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ನ.20  ತಾಲೂಕಿನ ಹಲವು ಗ್ರಾಮಗಳು ಈಗಾಗಲೇ 15ಕ್ಕೂ ಹೆಚ್ಚು ಕಂದಾಯ ಗ್ರಾಮಗಳಾಗಿ ಅಧಿಕೃತ ಪರಿವರ್ತನಗೊಂಡಿವೆ ಎಂದು ತಹಸೀಲ್ದಾರ್ ವಿ ಕಾರ್ತಿಕ್ ಹೇಳಿದರು.
ತಾಲೂಕಿನ ಹನಸಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರಿ ಭೂಮಿ ಹಾಗೂ ಖಾಸಗಿ ವಲಯದಲ್ಲಿರುವ ಕೆಲವು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಮುಂದಿನ ದಿನಗಳಲ್ಲಿ ಕಂದಾಯ ಗ್ರಾಮಗಳಾಗಿ ನಿರ್ಮಿಸುವ ಯೋಜನೆ ರೂಪಿಸಲಾಗುವುದು. ಕಾರ್ಯಕ್ರಮದಲ್ಲಿ ಸಮಸ್ಯೆ ಏನೇ ಇರಲಿ ಅರ್ಜಿ ಸಲ್ಲಿಸಿ ಬಗೆಹರಿಸಿಕೊಳ್ಳಿ ಗ್ರಾಮಕ್ಕೆ 3 ಎಕರೆ ಸ್ಮಶಾನ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲಾಗಿದೆ
ಗ್ರಾ ಪಂ ಸದಸ್ಯ ಗಂಗಾಧರಯ್ಯ
ಸರ್ಕಾರಿ ಪದವಿಪೂರ್ವ ಕಾಲೇಜ್ ನಿರ್ಮಾಣ, ಬಸ್ ನಿಲ್ದಾಣ, ಮುರಾರ್ಜಿ ಸ್ಕೂಲ್ ನಿರ್ಮಿಸಲು  ಅರ್ಜಿ ಸಲ್ಲಿಸಿದರು. ಇಲ್ಲಿ ಕಾಲೇಜ್ ಅವಶ್ಯಕತೆ ಇದೆ ಜನಸಂಖ್ಯೆ ಕೂಡ ಜಾಸ್ತಿ ಇದೆ ಒಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಎಂದರು
 ವಸತಿ ಸೌಕರ್ಯ, ಶೌಚಾಲಯ ಸೇರಿದಂತೆ 87 ಅರ್ಜಿಗಳು ಸಲ್ಲಿಕೆಯಾಗಿದೆ. ವಸತಿ ಸೌಕರ್ಯಕ್ಕೆ ಸಲ್ಲಿಸುವ ಅರ್ಜಿಗಳನ್ನು  ಅಂತಂತವಾಗಿ ಮನೆ ಇಲ್ಲದ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳಿಸಿ ಎಂದು ಪಿಡಿಒ ಗೆ ಹೇಳಿದರು. ಇದಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ನಿಜವಾದ ಬಡವರಿಗೆ ಅನ್ಯಾಯವಾಗುತ್ತದೆ30 ರಿಂದ 40 ಸಾವಿರ ರೂ. ಹಣ ಪಡೆದು ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಗ್ರಾಮದ ಮಂಜುನಾಥ ಮತ್ತು ಮೂಗಪ್ಪ  ಅಳಲು ತೋಡಿಕೊಂಡರು. ಗ್ರಾಮದ ಹೊರವಲಯದ ಬಂಡಿ ಮಲ್ಲಪ್ಪ ಗುಡ್ಡದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತದೆ ಇದನ್ನು ತಡೆಗಟ್ಟುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಶೌಚಾಲಯ ಒತ್ತುವರಿಯಾಗಿದ್ದು  ಅದನ್ನು ಕೂಡಲೇ ತೆರವುಗೊಳಿಸಲು ಸೂಚಿಸಲಾಯಿತು.
 ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ವೇತನ, ಅಂಗವಿಕಲರ ವೇತನ, ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ತಾ ಪಂ ಎ ಡಿ ರಮೇಶ್ ಮಹಾಲಿಂಗಪುರ್ ಮಾತನಾಡಿ ಶೌಚಾಲಯ ಬಳಸುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.
ಗ್ರಾ ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಸಿದ್ದೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಂಜನೇಯ ಹುಲ್ಲಾಳ, ಲೋಕೋಪಯೋಗಿ ಇಲಾಖೆಯ ಪುರುಷೋತ್ತಮ್, ಪಶುಸಂಗೋಪನೆಯ ಡಾ. ಸೂರಪ್ಪ, ತಾಲೂಕ ಆರೋಗ್ಯ ಅಧಿಕಾರಿ ಡಾ. ಎಂ.ಶಿವರಾಜ್, ಕೃಷಿ ಇಲಾಖೆಯ ಸುನಿಲ್ ಕುಮಾರ್ ನಾಯ್ಕ್, ಬಿಸಿ ಊಟದ ನಿರ್ದೇಶಕ ರವಿ ನಾಯ್ಕ್, ಬಿಸಿಎಂ  ಇಲಾಖೆಯ ವಿ. ರಮೇಶ್, ಎ ಇಇ ದೀಪಾ   ಇದ್ದರು