ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.14 ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಪಟ್ಟಣದ ತಾ ಪಂ ಸಭಾಂಗಣ ದಲ್ಲಿ ಇಂದು ಡಾ. ಬಿ ಆರ್ ಅಂಬೇಡ್ಕರ್ 132 ನೇ ಜಯಂತಿಯನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.
ತಹಸೀಲ್ದಾರ್ ಚಂದ್ರಶೇಖರ ಶೆಂಬಣ್ಣ ಗಾಳಿ ಡಾ. ಬಿ ಆರ್. ಅಂಬೇಡ್ಕರ್ ಬಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕು ಡಾ. ಬಿ ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಹೆಚ್. ದೊಡ್ಡಬಸಪ್ಪ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ದೇಶದ ರಾಜ್ಯದ ಬುಹುದೊಡ್ಡ ಆಸ್ತಿ ಅಂದರು ತಪ್ಪಲ್ಲ, ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತಗೋಳಿಸಬಾರದು, ದೇಶಕ್ಕೆ ಸಂವಿಧಾನ ನೀಡಿದ ಮಹಾತ್ಮ ಇಂದು ನಾವು ಪ್ರಜಾಪ್ರಭುತ್ವದ ಬಹು ದೊಡ್ಡ ದೇಶ ನಮ್ಮ ಭಾರತ ವಾಗಿದೆ. ಮಹಿಳೆಯರಿಗೆ ಸ್ಥಾನ ಮಾನ ನೀಡಿದ್ದು ಅಂಬೇಡ್ಕರ್, ಮನು ಸಂಸ್ಕೃತಿ ಯಿಂದ ಮಹಿಳೆಯರ ಬದುಕು ದುಸ್ಥರ ವಾಗಿದ್ದ ಸಂದರ್ಭದಲ್ಲಿ ಅದಕ್ಕೆ ನ್ಯಾಯ ಒದಗಿಸಿದ್ದು ಈ ಸಂವಿಧಾನ ನೀಡಿದ ಮಹಾತ್ಮ ಇದರ ಜೊತೆಗೆ ತುಳಿತಕ್ಕೊಳಗಾದವರು ಏಳಿಗೆ ಶ್ರಮಿಸಿದರು ಎಂದರು.
ಈ ಸಂದರ್ಭದಲ್ಲಿ ತಾ ಪಂ ಇ ಒ ಡಾ. ಜಿ. ಪರಮೇಶ್ವರಪ್ಪ, ಸಿಪಿ ಐ ಮಂಜಣ್ಣ, ಬಿ ಇ ಒ ಎಂ ಸಿ.ಆನಂದ್, ಸಮಾಜ ಕಲ್ಯಾಣ ಅಧಿಕಾರಿ ಆಂಜನೇಯ ಹುಲ್ಲಾಳ್, ಮುಖಂಡರಾದ ಕಾಳಿ ಬಸವರಾಜ್, ಲೋಕಪ್ಪ, ಪ್ರಭು, ಮರಿಯಪ್ಪ, ಹುಲುಗಪ್ಪ, ಮಹೇಶ್ ಮಾದುರ, ಬಿ ಜಿ ಹಳ್ಳಿ ಮಹೇಶ್, ಗಣೇಶ್ ಅಲಬೂರ್, ಬುಳಪ್ಪ, ಹನುಮಂತಪ್ಪ, ಬಸವರಾಜ್, ಇತರರಿದ್ದರು