ಹಬೋಹಳ್ಳಿ : ಜ.14,15ರಂದು ನಡೆಯುವ ಹರ ಜಾತ್ರಾ ಪೋಸ್ಟರ್ ಬಿಡುಗಡೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜ.03 ಪ್ರತಿವರ್ಷದಂತೆ ಜನವರಿ 14 ಮತ್ತು 15 ರಂದು ಪಂಚಮ ಸಾಲಿಗಳಿಗಾಗಿ ವಿಶೇಷವಾದಂತಹ ಹರ ಜಾತ್ರೋತ್ಸವ ನಡೆಯಲಿದೆ ಎಂದು ವಿಜಯನಗರ ಜಿಲ್ಲಾ ವೀರಶೈವ ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಪಾಟೀಲ್ ಹೇಳಿದರು
ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ರಾಜ್ಯ ಪಂಚಮಸಾಲಿ  ಸಂಘ ಹಾಗೂ ಪಂಚಮಸಾಲಿ ಮಠ ಸೇರಿ ಆಯೋಜಿಸಿರುವ ಹರ ಜಾತ್ರೋತ್ಸವಕ್ಕೆ ವಿಜಯನಗರ ಜಿಲ್ಲಾ ಸೇರಿದಂತೆ ತಾಲೂಕಿನ ಎಲ್ಲಾ ಮುಖಂಡರು ಹಾಗೂ ಭಕ್ತಾದಿಗಳನ್ನು ಆಹ್ವಾನಿಸಲು ಬಂದಿದ್ದೇನೆ.
ದಿ.ಜ 14ರಂದು ಬೆಳಗ್ಗೆ 8:30 ಕ್ಕೆ ಮಹಿಳೆಯರು ಬುತ್ತಿ ರೊಟ್ಟಿ  ಹೊತ್ತ ಮೆರವಣಿಗೆ ನಡೆಸಲಾಗುವುದು. 10:30ಕ್ಕೆ ಸಭೆಯ ಕಾರ್ಯಕ್ರಮ ಪ್ರಾರಂಭವಾಗುವುದು. ಮೀಸಲಾತಿ ಜನಜಾಗೃತಿ ಸಭೆ ಯನ್ನು ಶ್ರೀಗಳು ಉದ್ಘಾಟನೆ ಮಾಡಲಿದ್ದಾರೆ. ರಾಜ್ಯದ ಹಲವಾರು ಮಠಾಧೀಶರು ಸಮಾಜದ ಎಲ್ಲ ಶಾಸಕರು ಸಚಿವರು ಭಾಗವಹಿಸಲಿದ್ದಾರೆ.
 ಮಧ್ಯಾಹ್ನ 3ಕ್ಕೆ ರೈತರ ಸಮಾವೇಶ ನಡೆಯಲಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಸಚಿವರು ಶಾಸಕರು ಹಾಗೂ ಮಠಾಧೀಶರು ಭಾಗವಹಿಸಿದ್ದಾರೆ.
 ದಿನಾಂಕ 15 ರಂದು ಬೆಳಗ್ಗೆ ಯುವ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶವನ್ನು ಬಿವೈ ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಚನಾನಂದ ಸ್ವಾಮಿಗಳ 5ನೇ ವರ್ಷದ  ಪೀಠೋಹರಣ ನಡೆಯಲಿದೆ ಇದರ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂಬಿ ಪಾಟೀಲ್ ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ ಎರಡು ಸಂಜೆ 6 ರಿಂದ 8 ಗಂಟೆಯವರೆಗೆ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 ಕಾರ್ಯಕ್ರಮಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ರಾಜ್ಯ ಪಂಚಮಸಾಲಿ  ಗೌರವಾಧ್ಯಕ್ಷ ಬಾವಿ ಬಿಟ್ಟಪ್ಪ, ಬಳ್ಳಾರಿ ಜಿಲ್ಲೆಯ ಪಂಚಮಸಾಲಿ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಹರ ಜಾತ್ರೆಯ ಖಜಾಂಚಿ ಮಲ್ಲಿನಾಥ, ರಾಜ್ಯ ಯುವ ಘಟಕದ ಸಂಚಿ ಶಿವಕುಮಾರ್, ಮುಖಂಡರಾದ ಮಂಜುನಾಥ್ ಗೌಡ್ರು, ಬಾವಿ ರವಿ, ವೀರಭದ್ರಪ್ಪ, ರಾಕೇಶ್, ರಾಜ್ಯ ಮಹಿಳಾ ಅಧ್ಯಕ್ಷೆ ಮಂಗಳ ಬಸವರಾಜ್ , ಉಮಾ ಬಸವರಾಜ್ ಇತರರಿದ್ದರು.