ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.28 ಪಟ್ಟಣದ ಜೆಸ್ಕಾಂ ವಿಭಾಗದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಯನಿರ್ವಾಹಕ ಅಭಿಯಂತರಾದ ಶೇಖರ್ ಬಹುರೂಪಿ ಕೊಠಡಿಗೆ ಲೋಕಾಯುಕ್ತರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಇವರ ಬೆಳಗಾವಿ ನಿವಾಸ ಸೇರಿದಂತೆ ಇವರು ಕಾರ್ಯನಿರ್ವಹಿಸುವ ಹಗರಿಬೊಮ್ಮನಹಳ್ಳಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಾಗಿ ಕಳೆದ ಆರು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ
ಈ ದಾಳಿಯಿಂದ ಜೆಸ್ಕಾಂ ಇಲಾಖೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ದಿಗ್ರೆಮೆಗೊಳಗಾಗಿದೆ.
ನಿನ್ನೆ ಕೂಡ ಪುರಸಭೆಯ ಬಿಲ್ ಕಲೆಕ್ಟರ್ ಹನುಮಂತಪ್ಪ ಲಂಚ ತೆಗೆದುಕೊಳ್ಳುವಾಗ ಬಲೆ ಬೀಸಿದ ಲೋಕಾಯುಕ್ತರು ಖೆಡ್ಡಕ್ಕೆ ಕೆಡವಿದ್ದಾರೆ. ಈಗ ಜೆಸ್ಕಾಂ ಇಲಾಖೆಯ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು. ಮುಂದಿನ ದಿನಗಳಲ್ಲಿ ಯಾವ ಅಧಿಕಾರಿಯ ಮೇಲೆ ದಾಳಿಯಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
One attachment • Scanned by Gmail